ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಗುರುವಾರ ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾ.ಪಂನಲ್ಲಿ ಕೊನೆಯ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಸೋಮವ್ವ ಹನುಮಂತಪ್ಪ ಲಮಾಣಿ ಹಾಗೂ ಉಪಾಧ್ಯಕ್ಷರಾಗಿ ರಮೇಶ ಖೀರಪ್ಪ ಲಮಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಹಾಗೂ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್. ಕಲ್ಮನಿ ಘೋಷಿಸಿದರು.
ಒಟ್ಟು 11 ಜನ ಸದಸ್ಯ ಬಲ ಹೊಂದಿರುವ ಗ್ರಾ.ಪಂನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಯಾವುದೇ ಪೈಪೋಟಿಯಿಲ್ಲದೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಛಬ್ಬಿ ಪಂಚಾಯಿತಿ ವ್ಯಾಪ್ತಿಗೆ ಗುಡ್ಡದಪೂರ, ವರವಿ, ಛಬ್ಬಿ ಹಾಗೂ ಛಬ್ಬಿ ತಾಂಡೆ ಬರುತ್ತಿದ್ದು, ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷೆ ಸೋಮವ್ವ ಹನಮಂತಪ್ಪ ಲಮಾಣಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಚರಂಡಿ, ಕುಡಿಯುನ ನೀರು, ವಿದ್ಯುತ್ ದೀಪ ಸೇರಿದಂತೆ ಸರಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಛಬ್ಬಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ತಾ.ಪಂ ಮಾಜಿ ಸದಸ್ಯ ದೇವಪ್ಪ ಲಮಾಣಿ, ಗ್ರಾ.ಪಂ ಸದಸ್ಯರಾದ ಶ್ರೀಕಾಂತ ಗಾಳಿ, ಕೇಶವ ಕಾಳಪ್ಪ ಅಂಗಡಿ, ಸುವರ್ಣವ್ವ ಆರಿ, ರೇಣುಕಾ ತಿಮ್ಮಿಶೆಟ್ಟರ್, ದುರ್ಗಪ್ಪ ಪೋತರಾಜ ಹಾಗೂ ಗ್ರಾಮದ ಹಿರಿಯರಾದ ಹನುಮಂತ ಲಮಾಣಿ, ಚೋಕ್ಲಪ್ಪ ರಾಠೋಡ, ಈರಣ್ಣ ಚವ್ಹಾಣ, ದೇವು ನಾಯಕ್, ಹೇಮಲಪ್ಪ ಲಮಾಣಿ, ಪಿಡಿಒ ಎಂ.ಎಸ್. ಜಾವೂರ, ತಾ.ಪಂ ಸಿಬ್ಬಂದಿ ಅಶೋಕ ಧನವೆ ಮುಂತಾದವರು ಉಪಸ್ಥಿತರಿದ್ದರು.