ವಿಜಯಸಾಕ್ಷಿ ಸುದ್ದಿ, ಮುಳಗುಂದ : ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಎರಡನೇ ಅವಧಿಯ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಯಲ್ಲವ್ವ ಕವಲೂರ, ಉಪಾಧ್ಯಕ್ಷರಾಗಿ ಅನೂಸೂಯಾ ಸೋಮಗೇರಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾದ ತಹಸೀಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ ಅವಿರೋಧ ಆಯ್ಕೆ ಘೋಷಿಸಿದರು.
ಪ.ಪಂನಲ್ಲಿ ಒಟ್ಟೂ 19 ಸದಸ್ಯರಿದ್ದು, 15 ಸದಸ್ಯರು ಕಾಂಗ್ರೆಸ್, ಒರ್ವ ಪಕ್ಷೇತರ, 3 ಬಿಜೆಪಿ ಸದಸ್ಯರಿದ್ದಾರೆ. ಎರಡನೇ ಅವಧಿಯ ಮೀಸಲಾತಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಎಸ್‌ಸಿ ಮಹಿಳೆ ಮೀಸಲಾಗಿತ್ತು. ಕಾಂಗ್ರೆಸ್‌ನಲ್ಲಿ ಎಸ್‌ಸಿ ಮಹಿಳೆ ಇಲ್ಲದ ಕಾರಣ ಉಪಾಧ್ಯಕ್ಷ ಸ್ಥಾನವೂ ಬಿಜೆಪಿ ಪಾಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯಾರ್ಥಿಯಾಗಿ ಯಲ್ಲವ್ವ ಕವಲೂರ, ಉಪಾಧ್ಯಕ್ಷರಾಗಿ ಅನುಸೂಯಾ ಸೊಮಗೇರಿ ಆಯ್ಕೆಯಾಗಿರುವುದನ್ನು ತಹಸೀಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ ಪ್ರಕಟಿಸುತ್ತಿದ್ದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಚಿದರ್ಭದಲ್ಲಿ ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಸುಂಕಾಪೂರ ಮಾತನಾಡಿ, ಮುಳಗುಂದ ಪ.ಪಂ ಸದಸ್ಯರು ಚುನಾವಣೆ ಸಂದರ್ಭದಲ್ಲಿ ಮಾತ್ರ ತಮ್ಮ ತಮ್ಮ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದು, ಚುನಾವಣೆ ಮುಗಿದ ನಂತರ ಎಲ್ಲಾ ಪಕ್ಷದ ಸದಸ್ಯರು ಸೇರಿ ಪಟ್ಟಣದ ಅಭಿವೃದ್ಧಿಗಾಗಿ ಕೆಲಸ ಮಾಡಲು ಕೈ ಜೊಡಿಸುತ್ತಾ ಬಂದಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರಾದ ಎಂ.ಡಿ. ಬಟ್ಟೂರ, ಪಿ.ಎ. ವಂಟಕರ, ಸೈಯದಲಿ ಶೇಖ್, ಪ.ಪಂ ಸದಸ್ಯರಾದ ಕೆ.ಎಲ್. ಕರಿಗೌಡರ, ಎಸ್.ಸಿ. ಬಡ್ನಿ, ಇಮ್ಮಣ್ಣಾ ಶೇಖ್, ಮಾಹಾಂತೇಶ ನೀಲಗುಂದ, ಮಾಹಾದೇವಪ್ಪ ಗಡಾದ, ನಾಗರಾಜ ದೇಶಪಾಂಡೆ, ವಿಜಯ ನೀಲಗುಂದ, ಪಾರವ್ವ ಅಳ್ಳಣ್ಣವರ, ಚಂಪಾವತಿ ಗುಳೇದ, ಬಸವರಾಜ ಹಾರೋಗೇರಿ, ದ್ಯಾಮಣ್ಣಾ ನೀಲಗುಂದ, ಲಕ್ಷö್ಮವ್ವ ಕುಂದಗೋಳ ಸೇರಿದಂತೆ ಕಾಂಗ್ರೆಸ್ ಮುಂಖಡರು, ಬಿಜೆಪಿ ಮುಖಂಡರು ಪ.ಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.