ಗದಗ: ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ ನದಿ, ಬೆಣ್ಣಿಹಳ್ಳದ ಅಬ್ಬರಕ್ಕೆ ಬೆಳೆಗಳು ಜಲಾವೃತಗೊಂಡಿದೆ. ಮಲಪ್ರಭಾ ನದಿ, ಬೆಣ್ಣಿಹಳ್ಳದ ಪ್ರವಾಹಕ್ಕೆ ರೈತರು ಕಂಗಾಲಾಗಿದ್ದು,
Advertisement
ಗದಗ ಜಿಲ್ಲೆಯ ರೋಣ ತಾಲೂಕಿನ ಯ.ಸ. ಹಡಗಲಿ, ಹೊಳೆಆಲೂರ, ಮೆಣಸಗಿ, ಕುರುವಿನಕೊಪ್ಪ ಸೇರಿದಂತೆ ಹಲವು ಗ್ರಾಮಗಳ ಜಮೀನುಗಳಿಗೆ ಅಪಾರ ನದಿ ನೀರು ನುಗ್ಗಿ ಗೋವಿನ ಜೋಳ, ಹತ್ತಿ, ಕಬ್ಬು ಸೇರಿದಂತೆ ಹಲವು ಬೆಳೆಗಳು ನೀರುಪಾಲಾಗಿದೆ.
ಬಂಗಾರದಂಥ ಬೆಳೆಗಳು ನೀರು ಪಾಲಾಗಿದ್ದು ನೋಡಿ ರೈತರು ಕಂಗಾಲಾಗಿದ್ದು, ಮತ್ತೆ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಸರ್ಕಾರ, ಅಧಿಕಾರಿಗಲು ರೈತರ ನೆರವಿಗೆ ಬರಲು ಒತ್ತಾಯ ಮಾಡಿದ್ದಾರೆ.