ವಿಜಯಪುರ:- ಯುವತಿ ಬಟ್ಟೆ ಬಿಚ್ಚಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಮಂಗಳಮುಖಿಯರನ್ನು ಬಂಧಿಸಲಾಗಿದೆ.
ಮಂಗಳಮುಖಿಯರು ಸೇರಿಕೊಂಡು ಹೆಣ್ತನದಿಂದ ವಿಮುಖಳಾಗಿ ಪುರುಷರಂತೆ ವೇಷಭೂಷಣ ತೊಟ್ಟಿದ್ದ ಯುವತಿಯನ್ನು ಬೆತ್ತಲೆ ಮಾಡಿದರು. ನಗರದ ಕೇಂದ್ರ ಬಸ್ ನಿಲ್ಧಾಣದ ಬಳಿ ಜುಲೈ 21 ರಂದು ನಡೆದ ಈ ಘಟನೆ ವೈರಲ್ ಆಗಿತ್ತು. ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ, ವಿಡಿಯೋ ವೈರಲ್ ಆದ 24 ಗಂಟೆಗಳಲ್ಲಿ ಐವರು ಮಂಗಳಮುಖಿಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಯುವತಿ (ರೇಖಾ ರೆಡ್ಡಿ ಉರ್ಪ್ ಸಚಿವ ರೆಡ್ಡಿ) ಅವರು 6 ಮಂಗಳಮುಖಿಯರ ಮೇಲೆ ನಗರದ ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಸದ್ಯ ಮಂಗಳಮುಖಿಯರಾದ ಅಶ್ವಿನಿ, ಹುಲಿಗೆಮ್ಮಾ, ಕವಿತಾ, ದಾನಮ್ಮಾ ಹಾಗೂ ಮಾಹನಮ್ಮಾ ಅವರನ್ನು ಬಂಧಿಸಲಾಗಿದೆ. ಈ ಹಲ್ಲೆಯ ಕುರಿತು ತನಿಖೆ ಮಾಡಲಾಗುತ್ತಿದೆ, ತನಿಖೆ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ವಿಜಯಪುರ ಎಸ್ಪಿ ಋಷಿಕೇಷ ಸೋನೆವಣೆ ಹೇಳಿದ್ದಾರೆ.