ಮೈಸೂರು: ಮೈಸೂರಿನ ಪ್ರಿನ್ಸೆಸ್ ಅಥವಾ ರಾಜಕುಮಾರಿ ರಸ್ತೆಗೆ ಸಿಎಂ ಸಿದ್ದರಾಮಯ್ಯನವರ ಹೆಸರು ಇಡುವ ವಿಚಾರ ದೊಡ್ಡ ಚರ್ಚೆಗೆ ಬಂದಿದೆ. ಬುಧವಾರ ಕೆಆರ್ಎಸ್ ರಸ್ತೆಗೆ ಪ್ರಿನ್ಸಸ್ ರಸ್ತೆ ಎಂದು ಸ್ಟಿಕ್ಕರ್ ಅಂಟಿಸಿ ಪೂಜೆ ಮಾಡಿದ್ದರು.
ಆದ್ರೆ ರಾತ್ರೋ ರಾತ್ರಿ ಪ್ರಿನ್ಸಸ್ ರಸ್ತೆಯ ಸ್ಟಿಕ್ಕರ್ ತೆರವುಗೊಳಿಸಲಾಗಿದೆ. ವಿವಿಧೆಡೆ ಅಳವಡಿಸಿದ್ದ ಪ್ರಿನ್ಸಸ್ ರಸ್ತೆ ನಾಮಫಲಕವನ್ನು ತೆರವುಗೊಳಿಸಿದ್ದು ಅಧಿಕಾರಿಗಳೋ, ಪೊಲೀಸರು ಎಂಬ ಪ್ರಶ್ನೆ ಮೂಡಿದೆ. ಸಿದ್ದರಾಮಯ್ಯ ಆರೋಗ್ಯ ಮಾರ್ಗ ಹೆಸರು ಇಡಬೇಕೆಂಬ ಕಾಂಗ್ರೆಸ್ ಚಿಂತನೆಯಾಗಿದೆ. ಆದರೆ ಪ್ರಿನ್ಸೆಸ್ ರಸ್ತೆ ಹೆಸರು ಇರುವಾಗ ಬದಲಾವಣೆ ಬೇಡ ಅಂತ ಬಿಜೆಪಿ ಆಗ್ರಹಿಸಿದೆ.
ಇನ್ನೂ ಕೆಆರ್ಎಸ್ ರಸ್ತೆಗೆ ಪ್ರಿನ್ಸಸ್ ರಸ್ತೆ ದಾಖಲೆ ಇಲ್ಲ ಎಂದು ಕಾಂಗ್ರೆಸ್ ಮುಖಂಡರು ವಾದಿಸುತ್ತಿದ್ದಾರೆ. ಆದರೆ, ಪ್ರಿನ್ಸಸ್ ರಸ್ತೆ ಎಂದು ಹೆಸರಿರುವ ನಾಮಫಲಕ ಲಭ್ಯವಾಗಿದೆ. ಯಾದವಗಿರಿ ರೈಲ್ವೆ ಬಡಾವಣೆಯ ಮನೆಗೆ ನಾಮಫಲಕ ಅಳವಡಿಸಲಾಗಿದೆ. ಮನೆ ನೇಮ್ ಬೋರ್ಡ್ನಲ್ಲಿ ಪ್ರಿನ್ಸಸ್ ರಸ್ತೆ ಎಂದು ನಮೂದಿಸಲಾಗಿದೆ.


