ಬಳ್ಳಾರಿ:- ಸಿಸೇರಿಯನ್ ಮಾಡಿಸಿಕೊಂಡ ಬಾಣಂತಿ ಸಾವನ್ನಪ್ಪಿದ ಘಟನೆ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಜರುಗಿದೆ. ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಿಸಿಕೊಂಡ ಬಳಿಕ ಮೂವರು ಬಾಣಂತಿಯರ ಸಾವು ಪ್ರಕರಣ ಮಾಸುವ ಮುನ್ನವೇ ಈ ಘಟನೆ ಜರುಗಿದೆ.
Advertisement
22 ವರ್ಷದ ಮುಸ್ಕಾನ್ ಸಾವನ್ನಪ್ಪಿದ ಬಾಣಂತಿ ಎನ್ನಲಾಗಿದೆ. ಈ ಮೂಲಕ 15 ದಿನಗಳ ಅಂತರದಲ್ಲಿ ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಸೋಮವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮುಸ್ಕಾನ್ ಮೃತಪಟ್ಟಿದ್ದಾರೆ.
ಈ ಮೂಲಕ ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯ ಬಟಾ ಬಯಲಾಗಿದೆ.