ಕರ್ನಾಟಕದಲ್ಲಿ ಸಿನಿಮಾದ ಟಿಕೆಟ್ ದರಗಳ ಬಗ್ಗೆ ಸಾಕಷ್ಟು ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಲೆ ಇದೆ. ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆದಾಗೆಲ್ಲಾ ಟಿಕೇಟ್ ದರ ಏರಿಕೆ ಮಾಡುತ್ತಿದ್ದು ಇದರಿಂದ ಸಿನಿ ಪ್ರೇಮಿಗಳಿಗೆ ಬೇಸರವಾಗುತ್ತಿದೆ. ಇದೀಗ ಸರ್ಕಾರ ದೊಡ್ಡ ನಿರ್ಧಾರವೊಂದನ್ನು ಪ್ರಕಟಿಸಿದ್ದು ಇದರಿಂದ ಸಿನಿ ಪ್ರೇಮಿಗಳಿಗೆ ಸಖತ್ ಖುಷಿಯಾಗಿದೆ.
ಇಂದಿನಿಂದ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಏಕರೂಪ ದರ ಜಾರಿಗೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ200 ರೂ ಟಿಕೆಟ್ ದರ ನಿಗದಿ ಮಾಡಿ ಸರ್ಕಾರದ ಆದೇಶ ಹೊರಡಿಸಿದೆ.
ತೆರಿಗೆ ಸೇರಿದಂತೆ ಟಿಕೆಟ್ ದರ 200 ನಿಗದಿ ಮಾಡಿ ಸರ್ಕಾರ ಆದೇಶ ನೀಡಿದ್ದು, ಇಂದಿನಿಂದಲೇ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪ ದರ ನಿಗದಿ ಸಾಧ್ಯತೆ ಇದೆ.
ಇದರ ಜೊತೆಗೆ ಕೆಲವು ಷರತ್ತುಗಳನ್ನು ಕೂಡ ಸರ್ಕಾರ ಹೇರಿದೆ. ಅನೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಗೋಲ್ಡ್ ಕ್ಲಾಸ್ ವ್ಯವಸ್ಥೆ ಇರುತ್ತವೆ. ಇವುಗಳಿಗೆ 200 ರೂಪಾಯಿ ಟಿಕೆಟ್ ದರದ ಮಿತಿ ಇಲ್ಲ. ಆ ಆಸನಗಳಿಗೆ ಮಲ್ಟಿಪ್ಲೆಕ್ಸ್ಗಳು ತಮ್ಮಿಷ್ಟದ ದರ ನಿಗದಿ ಮಾಡಬಹುದು. ಬಹುತೇಕ ಮಲ್ಟಿಪ್ಲೆಕ್ಸ್ಗಳಲ್ಲಿ ರಿಕ್ಲೈನ್ ಸೀಟ್ಗಳು ಇರುತ್ತವೆ. ಅವುಗಳಿಗೂ 200 ರೂಪಾಯಿ ಟಿಕೆಟ್ ದರ ಅನ್ವಯ ಆಗುತ್ತದೆ ಎನ್ನಲಾಗಿದೆ. ಸದ್ಯ ಟಿಕೆಟ್ ಮಂದಿರಗಳಿಗೆ ಆದೇಶ ಪ್ರತಿ ತಲುಪಿಲ್ಲ. ಇದು ತಲುಪಿದ ಬಳಿಕ ನಿಯಮ ಜಾರಿಗೆ ಬರಲಿದೆ.



