ಚಿಕ್ಕಬಳ್ಳಾಪುರ:– ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬಿಜೆಪಿ ನಡೆಸಿದ ಅಹೋರಾತ್ರಿ ಧರಣಿಯಿಂದ ಜೆಡಿಎಸ್ ದೂರ ವಿಚಾರವಾಗಿ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸಚಿವ HD ಕುಮಾರಸ್ವಾಮಿ ಅವರನ್ನು ವ್ಯಂಗ್ಯವಾಡಿದ್ದಾರೆ.
Advertisement
ನಗರದಲ್ಲಿ ಮಾತನಾಡಿದ ಅವರು, ಹೆಚ್‌ಡಿಕೆ ಅವರದ್ದು ಒಳ್ಳೆ ಮನಸ್ಸು. ಅವರಿಗೆ ಏನೂ ಗೊತ್ತಾಗಲ್ಲ. ಯಾರು ಚಾಕ್ಲೇಟ್ ಕೊಡ್ತಾರೋ ಅವರ ಕಡೆ ಹೋಗುತ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಲೇವಡಿ ಮಾಡಿದರು.
ಮೊದಲಿಗೆ ಬಿಜೆಪಿಯವರಿಗೆ ತಾಕತ್ ಇದ್ರೆ ಕೇಂದ್ರದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಇಳಿಸಲು ಹೇಳಿ. ಹೊಗಲಿ ಬಿಜೆಪಿಯವರಿಗೆ ಏನಾದ್ರು ಇದ್ರೆ ನಮ್ಮ ಜಿಎಸ್‌ಟಿ ಹಣ ಕೊಡಿಸಲಿ. ಸದಾ ಸುದ್ದಿಯಲ್ಲಿರಲು ಬಿಜೆಪಿಯವರು ಧರಣಿ ಹಮ್ಮಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.