ದೊಡ್ಡಬಳ್ಳಾಪುರ : ಕೆಲಸದಿಂದ ಮನೆಯತ್ತ ನಡೆದುಕೊಂಡು ಬರುತ್ತಿದ್ದ ವ್ಯಕ್ತಿಗೆ ಅಪರಿಚಿತ ಬಸ್ ಡಿಕ್ಕಿ ಹೊಡೆದಿದೆ, ಘಟನೆ ನಂತರ ಚಾಲಕ ಬಸ್ ಸಮೇತ ಪರಾರಿಯಾಗಿದ್ದಾನೆ.
ಹಿಟ್ ಅಂಡ್ ರನ್ ಕೇಸ್ ನಲ್ಲಿ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದೊಡ್ಡಬಳ್ಳಾಪುರ ನಗರದ ಮುತ್ತೂರಿನ ಅಂಜನೇಯ ದೇವಸ್ಥಾನದ ಬಳಿ ನಿನ್ನೆ ರಾತ್ರಿ 8 ಗಂಟೆ ಸಮಯದಲ್ಲಿ ಘಟನೆ ನಡೆದಿದೆ.
ಘಟನೆಯಲ್ಲಿ 26 ವರ್ಷದ ಖದೀರ್ ಪಾಷಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಮೃತ ವ್ಯಕ್ತಿ ಮೂತ್ತೂರಿನ ನಿವಾಸಿಯಾಗಿದ್ದು, ಮೂಟೆ ಹೊರುವ ಕೆಲಸ ಮಾಡುತ್ತಿದ್ದ, ರಾತ್ರಿ 8 ಗಂಟೆ ಸಮಯದಲ್ಲಿ ಕೆಲಸ ಮುಗಿದ ನಂತರ ರೈಲ್ವೆ ಸ್ಟೇಷನ್ ನಿಂದ ಊಟ ಪಾರ್ಸಲ್ ತಗೊಂಡ್ ಬರುವಾಗ ಈ ಘಟನೆ ನಡೆದಿದೆ.
ರಸ್ತೆಯ ಪಕ್ಕದಲ್ಲಿ ನೆಡದುಕೊಂಡು ಹೋಗುತ್ತಿದ್ದ ಖದೀರ್ ಪಾಷನಿಗೆ ಅಪರಿಚ ವಾಹನ ಡಿಕ್ಕಿ ಹೊಡೆದಿದೆ, ಘಟನೆ ನಂತರ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ.
ಮುತ್ತೂರು ಬಳಿ ಅಪಘಾತಗಳು ಸಾಮಾನ್ಯವಾಗಿವೆ ಎಂಬುದು ಸ್ಥಳೀಯರ ಆರೋಪ, ಕಿರಿದಾದ ರಸ್ತೆ, ರಸ್ತೆ ಬದಿಯಲ್ಲಿ ಬೀದಿ ದೀಪಗಳು ಅಳವಡಿಸದೆ ಇರೋದು ಮತ್ತು ಹಪ್ಸ್ ಗಳನ್ನ ಅಳವಡಿಸದೆ ಇರೋದು ಅಪಘಾತಗಳಿಗೆ ಕಾರಣವಾಗಿದೆ.
ದೊಡ್ಡಬಳ್ಳಾಪುರ ನಗರಸಭೆ ಅಧಿಕಾರಿಗಳು ಬೀದಿ ದೀಪಗಳನ್ನ ಅಳವಡಿಸಿ ಅಮಾಯಕರ ಪ್ರಾಣಗಳನ್ನು ರಕ್ಷಣೆ ಮಾಡುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.