ಲಕ್ಮೇಶ್ವರ ತಾಲೂಕಿನ ಕೃಷಿ ಸಮಾಜದ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ಅವಿರೋಧ ಆಯ್ಕೆ ಮಾಡಲಾಯಿತು. ಸಮಿತಿಗೆ 5 ವರ್ಷದ ಅವಧಿಗೆ ಮಹೇಶ ಹೊಗೆಸೊಪ್ಪಿನ (ಅಧ್ಯಕ್ಷ), ಫಕ್ಕೀರಗೌಡ ಅಜ್ಜನಗೌಡ್ರ (ಉಪಾಧ್ಯಕ್ಷ), ಸಿದ್ದಲಿಂಗೇಶ್ವರ ರಗಟಿ (ಪ್ರ.ಕಾರ್ಯದರ್ಶಿ) ಬಸವರಾಜೇಂದ್ರಪ್ಪ ಇಟಗಿ (ಖಜಾಂಚಿ), ವಿರೇಂದ್ರಗೌಡ ಪಾಟೀಲ (ಜಿಲ್ಲಾಪ್ರತಿನಿಧಿ) ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ ಕಾರ್ಯನಿರ್ವಹಿಸಿದರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದಗೌಡ ಪಾಟೀಲ, ಎಂ.ಎಸ್. ದೊಡ್ಡಗೌಡ್ರ, ವಿ.ಜಿ. ಪಡಿಗೇರಿ, ರಾಜು ಪಾಟೀಲ, ಅಶೋಕ ನೀರಾಲೋಟಿ, ಶಿವು ಮಾನ್ವಿ, ಬಸವರೆಡ್ಡಿ ಹನಮರೆಡ್ಡಿ, ರಾಜು ಕುಂಬಿ, ಸತೀಶ ಪಾಟೀಲ ಇದ್ದರು.
Advertisement