ನಿಡಗುಂದಿ ಗ್ರಾ.ಪಂಗೆ ಅವಿರೋಧ ಆಯ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ನಿಡಗುಂದಿ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರೊಬ್ಬರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಇಮಾಮಸಾಬ ಮಾದರಸಾಬ ಬಾಗವಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ಮುರ್ತುಜಾ ಖಾದರ್ ಮುಲ್ಲಾ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಚುನಾವಣೆ ಜರುಗಿತು. ಚುನಾವಣಾಧಿಕಾರಿಯಾಗಿ ರೋಣ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ವಿರೂಪಾಕ್ಷಯ್ಯ ಹಿರೇಮಠ ಕಾರ್ಯ ನಿರ್ವಹಿಸಿದರು. ಇಮಾಮಸಾಬ ಬಾಗವಾನ ಹೊರತುಪಡಿಸಿ ಬೇರೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗದ್ದರಿಂದ ಚುನಾವಣಾಧಿಕಾರಿ ಬಾಗವಾನರ ಆಯ್ಕೆಯನ್ನು ಅವಿರೋಧವೆಂದು ಘೋಷಿಸಿದರು.

ನಿಡಗುಂದಿ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಆಯ್ಕೆಯಾದ ಇಮಾಮಸಾಬ್ ಬಾಗವಾನ ಅವರನ್ನು ತಾ.ಪಂ ಮಾಜಿ ಸದಸ್ಯ ಅಂದಪ್ಪ ಬಿಚ್ಚೂರ ನೇತೃತ್ವದಲ್ಲಿ ಅಭಿನಂದಿಸಿ ಗೌರವಿಸಿದರು.


Spread the love

LEAVE A REPLY

Please enter your comment!
Please enter your name here