ಹಾಸನ: ಕಳೆದ ಕೆಲವು ದಿನಗಳಿಂದ ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಯುವಕ- ಯುವತಿಯರು ಸೇರಿದಂತೆ ಮಧ್ಯವಯಸ್ಕರು ಬಲಿ ಆಗುತ್ತಿರುವುದು ಆತಂಕ ಮೂಡಿಸಿದೆ.ಇದೀಗ ಶಿವಮೊಗ್ಗ ಜಿಲ್ಲೆಯ ಆಯನೂರಿನಲ್ಲಿ ಬಾಣಂತಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಹಾಸನ ಜಿಲ್ಲೆಯ ಕೊಮ್ಮೆನಹಳ್ಳಿಯವರಾದ ಹರ್ಷಿತಾ ಹೆಚ್. (22) ಮೃತ ದುರ್ಧೈವಿಯಾಗಿದ್ದು, ಬಾಣಂತನಕ್ಕಾಗಿ ಶಿವಮೊಗ್ಗ ಜಿಲ್ಲೆಯ ಆಯನೂರಿನ ತವರು ಮನೆಯಲ್ಲಿ ತಂಗಿದ್ದರು. ತಡರಾತ್ರಿ, ಹರ್ಷಿತಾ ಅವರಿಗೆ ಎದೆನೋವು ಕಾಣಿಸಿಕೊಂಡಿತು. ಆತಂಕಗೊಂಡ ಅವರು, ತಕ್ಷಣ ತಮ್ಮ ಗಂಡನನ್ನು ಹಾಸನದಿಂದ ಕರೆಸಿಕೊಂಡಿದ್ದರು.
ಆದರೆ, ಎದೆನೋವಿನ ತೀವ್ರತೆ ಕಡಿಮೆಯಾಗದ ಕಾರಣ, ಬೆಳಗ್ಗೆ ಅವರನ್ನು ಆಯನೂರು ಆಸ್ಪತ್ರೆಗೆ ಕರೆದೊಯ್ಯಲು ಅಂಬ್ಯುಲೆನ್ಸ್‌ನಲ್ಲಿ ವ್ಯವಸ್ಥೆ ಮಾಡಲಾಯಿತು. ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆಯೇ ಹರ್ಷಿತಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇನ್ನೂ ಕಳೆದ ಕೆಲವು ತಿಂಗಳಿಂದ ಹೃದಯಾಘಾತದಿಂದ ಸಾವಿನ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವುದು ಗಂಭೀರ ಚಿಂತೆಗೆ ಕಾರಣವಾಗಿದೆ.