ಬೆಂಗಳೂರು:- ಚಿಕಿತ್ಸೆ ಫಲಿಸದ ಹಿನ್ನೆಲೆ, ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಬಿಬಿಎಂಪಿ ಲಾರಿ ಚಾಲಕ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ಕೊಂಡಯ್ಯ(55) ಮೃತ ಲಾರಿ ಚಾಲಕ. ನಗರದ ಥಣಿಸಂಧ್ರದ ಹೆಗಡೆ ನಗರದ ಬಳಿ ಬಿಬಿಎಂಪಿ ಲಾರಿಯಿಂದ ಅಪಘಾತವಾಗಿತ್ತು. ಲಾರಿ ಗುದ್ದಿದ ಪರಿಣಾಮ ಬೈಕ್‌ನಲ್ಲಿದ್ದ 10 ವರ್ಷದ ಬಾಲಕ ಮೃತಪಟ್ಟಿದ್ದ. ಬಾಲಕನ ತಂದೆ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರು.
ಅಪಘಾತ ಆದ ಪರಿಣಾಮ ಬಿಬಿಎಂಪಿ ಲಾರಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿತ್ತು. ಅಲ್ಲದೇ, ಲಾರಿ ಚಾಲಕನಿಗೆ ಮನಸೋ ಇಚ್ಛೆ ಥಳಿಸಿತ್ತು. ಹಲ್ಲೆ ಆದ ಪರಿಣಾಮ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಚಾಲಕ ಗಂಭೀರ ಸ್ಥಿತಿ ತಲುಪಿ ಖಾಸಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಬಿಬಿಎಂಪಿ ಕಸದ ಲಾರಿ ಚಾಲಕನಿಗೆ ಥಳಿಸಿದ ಸಂಬಂಧ ನಾಲ್ವರು ಆರೋಪಿಗಳನ್ನ ಬಂಧಿಸಿ ಸಂಪಿಗೆಹಳ್ಳಿ ಪೊಲೀಸರು ಜೈಲಿಗೆ ಕಳಿಸಿದ್ದಾರೆ.