ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಸ್ಥಾಪಿಸಿದ `ಅನುಭವ ಮಂಟಪ’ವು ಜಗತ್ತಿನ ಮೊಟ್ಟ ಮೊದಲ ಸಂಸತ್ತು (ಪಾರ್ಲಿಮೆಂಟ್) ಎಂದು ಪರಿಗಣಿಸಲಾಗಿದೆ. ಬಸವಣ್ಣನವರು ಈ ಅನುಭವ ಮಂಟಪದಲ್ಲಿ `ಶೂನ್ಯಪೀಠ’ವನ್ನು ನಿರ್ಮಿಸಿ, ಇದರ ಮೊದಲ ಅಧ್ಯಕ್ಷರನ್ನಾಗಿ `ಅಲ್ಲಮಪ್ರಭು ದೇವರ’ನ್ನು ನೇಮಿಸಿದರು. ಇಂಥ ಅನುಭವ ಮಂಟಪ ನಮ್ಮ ಕನ್ನಡ ನಾಡಿನಲ್ಲಿರುವುದು ಕನ್ನಡಿಗರಿಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.
ಅನುಭವ ಮಂಟಪವು ಜಾತಿ, ವರ್ಣ, ವರ್ಗ ರಹಿತ-ಧರ್ಮ ಸಹಿತ, ಲಿಂಗ ಸಮಾನತೆಯ ಸಂಕೇತವಾಗಿದೆ. ಇಲ್ಲಿ ಪ್ರಜಾಪ್ರಭುತ್ವದ ಮೂಲ ಆಶಯ ಸಮಾನತೆ, ಸಹೋದರತ್ವ, ಮಾನವೀಯ ಸಂದೇಶಗಳನ್ನು ಇಡೀ ಜಗತ್ತಿಗೆ ನೀಡಿದವರು ಬಸವಾದಿ ಶಿವಶರಣರು.
ಬೆಳಗಾವಿ ಸುವರ್ಣ ಸೌಧದಲ್ಲಿ 20 ಅಡಿ ಉದ್ದ, 10 ಅಡಿ ಅಗಲವುಳ್ಳ ಅನುಭವ ಮಂಟಪದ ತೈಲ ಚಿತ್ರವನ್ನು ಅನಾವರಣಗೊಳಿಸಿದ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ, ವಿಧಾನಮಂಡಲದ ಅಧ್ಯP್ಷÀ ಯು.ಟಿ. ಖಾದರ ಮತ್ತು ವಿಧಾನಸಭೆಯ ಎಲ್ಲ ಸದಸ್ಯರುಗಳಿಗೆ, ಮಂತ್ರಿಗಳಿಗೂ ಗದಗ ಬಸವದಳ ಅಧ್ಯಕ್ಷರಾದ ಶರಣ ವಿ.ಕೆ. ಕರೇಗೌಡ್ರ ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.



