ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಕ್ಕಳ ಕಲಿಕಾ ಹಬ್ಬವು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ ಎಂದು ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಹೇಳಿದರು.
ಅವರು ಸಮೀಪದ ಶ್ಯಾಗೋಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಕ್ಕಹಂದಿಗೋಳ ಕ್ಲಸ್ಟರ್ ಮಟ್ಟದ ಎಫ್.ಎಲ್.ಎನ್ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಗಳಿರುವುದನ್ನು ಗುರುತಿಸಿ ಅವುಗಳನ್ನು ಹೊರಹಾಕಲು ಇಂತಹ ವೇದಿಕೆಗಳು ಸಹಕಾರಿಯಾಗುತ್ತವೆ. ಶಿಕ್ಷಕರು, ಪಾಲಕರು ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಮಕ್ಕಳ ಭವಿಷ್ಯಕ್ಕೆ ಬುನಾದಿಯಾಗಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ಶೋಭಾ ನೀಲಪ್ಪಗೌಡ್ರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಎಂ. ಹಿರೇಮಠ, ಗ್ರಾ.ಪಂ ಅಧ್ಯಕ್ಷೆ ನಿವೇದಿತಾ ಹಿರೇಮಠ, ಸದಸ್ಯ ಎಸ್.ಜಿ. ವೆಂಕನಗೌಡ್ರ, ಕೊಟ್ರೇಶ ಕೆ, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಸ್.ಆರ್. ಬಂಡಿ, ಅಕ್ಷರ ದಾಸೋಹ ಅಧಿಕಾರಿ ಶಂಕರ ಹಡಗಲಿ, ರಾಮಣ್ಣಾ ಕುರ್ತಕೋಟಿ, ಪ್ರೇಮಾ ಅಣ್ಣಿಗೇರಿ, ಮಂಜುನಾಥ ಕೊರ್ಲಹಳ್ಳಿ, ಗುರುನಾಥ ಗುಡಗೇರಿ, ಬಸಪ್ಪ ಅಣ್ಣಿಗೇರಿ, ರಾಮಣ್ಣಾ ಕಿರಬಣ್ಣವರ, ರಾಜು ಕುರಿ, ಸಿಆರ್‌ಪಿ ಡಿ.ಸಿ. ನದಾಫ್, ಶಾಲಾ ಪ್ರಧಾನ ಗುರು ಬಿ.ಎಸ್. ಹುಲ್ಯಾಳ ಪಾಲ್ಗೊಂಡಿದ್ದರು.



