ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ತನ್ನದೇ ಆದ ಖ್ಯಾತಿ ಘಳಿಸಿರುವ ನಟ ಕಂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಇದೀಗ ಸೈಲೆಂಟ್ ಆಗಿ ಸಿನಿಮಾವೊಂದನ್ನು ಶುರುಮಾಡಿದ್ದಾರೆ. ಉಪೇಂದ್ರ ನಟನೆಯ ಹೊಸ ಸಿನಿಮಾ ಅನೌನ್ಸ್ ಆಗಿದ್ದು ಚಿತ್ರಕ್ಕೆ ʼನೆಕ್ಸ್ಟ್ ಲೆವೆಲ್ʼ ಎಂಬ ಟೈಟಲ್ ಇಡಲಾಗಿದೆ. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಅರವಿಂದ್ ಕೌಶಿಕ್ ನಿರ್ದೇಶನ ಮಾಡುತ್ತಿದ್ದಾರೆ.
ಸದ್ಯ ಉಪೇಂದ್ರ ನಾಗಣ್ಣ ನಿರ್ದೇಶನದ ʻಭಾರ್ಗವʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಈ ಸಿನಿಮಾದ ಬಗ್ಗೆ ಮಾತನಾಡಿರುವ ನಿರ್ಮಾಪಕ ತರುಣ್ ಶಿವಪ್ಪ, “ತರುಣ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಆರನೇ ಚಿತ್ರವಿದು. ಬಾಲಿವುಡ್ ತೆಲುಗು, ತಮಿಳು ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಉಪೇಂದ್ರ ಅವರ ಎ, ಉಪೇಂದ್ರ ಸ್ಟೈಲ್‌ನಲ್ಲಿ ನೆಕ್ಸ್ಟ್ ಲೆವೆಲ್ ಸಿನಿಮಾ ಇರಲಿದೆ. ಸದ್ಯ ಪ್ರೀ ಪ್ರೊಡಕ್ಷನ್ ವರ್ಕ್‌ನಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ ಎಂದಿದ್ದಾರೆ.
‘ನಮ್ ಏರಿಯಾಲ್ ಒಂದಿನ’, ‘ತುಗ್ಲಕ್’, ‘ಹುಲಿರಾಯ’ ಹಾಗೂ ‘ಶಾರ್ದೂಲʼ ಚಿತ್ರಗಳನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದಾರೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ, ಅರವಿಂದ್ ಕೌಶಿಕ್, ಹಾಗೂ ತರುಣ್ ಶಿವಪ್ಪ ಒಂದಾಗಿ ನೆಕ್ಸ್ಟ್ ಲೆವೆಲ್ ಸಿನಿಮಾ ಮಾಡ್ತಿರೋದ್ರಿಂದ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ.
ಇನ್ನು ಉಪೇಂದ್ರ ನಟನೆಯ ‘45’ ಮತ್ತು ‘ಕೂಲಿ’ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ‘ಬುದ್ಧಿವಂತ 2’, ‘ಕಬ್ಜ 2’ ಸಿನಿಮಾಗಳಲ್ಲಿ ಸಹ ಉಪೇಂದ್ರ ನಟಿಸಲಿದ್ದಾರೆ. ಈ ಸಿನಿಮಾಗಳು ಮುಗಿದ ಮೇಲೆ ನೆಕ್ಸ್ಟ್ ಲೆವೆಲ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.