ನೆಲಮಂಗಲ: ಡಾಬಾ ಬಳಿ ವಾಹನ ನಿಲ್ಲಿಸುವ ವಿಚಾರಕ್ಕೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಜ್ಯಾಕ್ ರಾಡ್ನಿಂದ ವ್ಯಕ್ತಿಯ ತಲೆಗೆ ಹಲ್ಲೆ ಮಾಡಲಾಗಿದ್ದು, ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ಕ್ರಾಸ್ ಸಮೀಪದ ಗ್ರೀನ್ ಪಾರ್ಕ್ ಡಾಬಾ ಬಳಿ ಘಟನೆ ಜರುಗಿದೆ. ಮೃತನನ್ನು ಬೆಂಗಳೂರು ಉತ್ತರ ತಾಲೂಕಿನ ಶ್ಯಾನಬೋಗನಹಳ್ಳಿ ನಿವಾಸಿ 29 ವರ್ಷದ ಪ್ರದೀಪ್ ಎಂದು ಗುರುತಿಸಲಾಗಿದೆ.
ಮಹೇಶ್ ಎಂಬಾತ ಪ್ರದೀಪ್ ತಲೆಗೆ ಹಲ್ಲೆ ನೆಡೆಸಿದ್ದ ಆರೋಪ ಕೇಳಿ ಬಂದಿದೆ. ಮಹೇಶನ ಜೊತೆಯಲ್ಲಿದ್ದ ಬೋರಲಿಂಗ ಮತ್ತು ಸುನೀಲ್ ಆರೋಪಿಗಳು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬೆಂ.ಗ್ರಾ.ಜಿಲ್ಲಾ ಎಸ್ಪಿ ಸಿ.ಕೆ ಬಾಬಾ ಭೇಟಿ ಪರಿಶೀಲನೆ ಮಾಡಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



