ವಿಜಯಸಾಕ್ಷಿ ಸುದ್ದಿ, ಗದಗ: ಜಮ್ಮು- ಕಾಶ್ಮೀರದಲ್ಲಿ ಮಂಗಳವಾರ ಪ್ರವಾಸಿಗರಿಗೆ ಹೆಸರು, ಧರ್ಮ ಕೇಳಿ ಗುಂಡಿನ ದಾಳಿ ನಡೆಸಿದ ಉಗ್ರರ ನಡೆ ಖಂಡನಿಯ. ಈ ದಾಳಿ ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ ವಕ್ಫ್ ಬಿಲ್‌ನ ಪ್ರತೀಕಾರವೇ ಆಗಿದೆ ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉಗ್ರರ ದಾಳಿ ಅಮಾಯಕ ಸಾರ್ವಜನಿಕರ ಜೀವ ತೆಗೆದಿದೆ. ದಾಳಿಯ ಹಿಂದಿನ ಸಂಚು ರೂಪಿಸಿದ ದಾಳಿಕೋರರ ನಿರ್ನಾಮದ ಜೊತೆಗೆ ಉಗ್ರರ ಜೊತೆಗೆ ನಂಟು ಹೊಂದಿದ ಎಲ್ಲ ಸಂಘಟನೆಗಳನ್ನು ನಿರ್ನಾಮ ಮಾಡುವ ಮೂಲಕ ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು.
ದಾಳಿ ನಡೆದ ಕೆಲವೇ ಘಂಟೆಗಳಲ್ಲಿ ನಮ್ಮ ಭಾರತೀಯ ಯೋಧರು ಇಬ್ಬರು ಉಗ್ರರನ್ನು ಗುಂಡಿಕ್ಕಿ ಕೊಂದಿದ್ದಾರೆ. ದೇಶದಲ್ಲಿ ಉಗ್ರರ ತಾಣವನ್ನು ಬೇರು ಸಮೇತವಾಗಿ ನಾಶ ಮಾಡಬೇಕು. ಇಂದು ಧರ್ಮದ ಹೆಸರು ಕೇಳಿ ಗುಂಡಿಕ್ಕಿದವರು ನಾಳೆ ಜಾತಿ ಹೆಸರಲ್ಲಿ ನಮ್ಮನೆಲ್ಲ ಒಕ್ಕಲೆಬ್ಬಿಸುತ್ತಾರೆ. ಇದಕ್ಕೆ ಅವಕಾಶ ನೀಡದೆ ಹಿಂದುತ್ವ ಉಳಿಸುವುದಕ್ಕೆ ನಾವೆಲ್ಲರೂ ಕೈಜೋಡಿಸಿಬೇಕು ಎಂದು ತಿಳಿಸಿದ್ದಾರೆ.