ಬೆಂಗಳೂರು: ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು ಭಾಷೆ ಬಳಕೆ ಮಾಡಿರುವ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು ಬಳಕೆ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅದು ನನ್ನ ಗಮನಕ್ಕೆ ಬಂದಿಲ್ಲ. ವಿಚಾರ ತಿಳಿದುಕೊಂಡು ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.
ನಮ್ಮಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಇದೆ. ನಮ್ಮ ಮಣ್ಣಿನ ಭಾಷೆ, ನಮ್ಮ ತಾಯಿ ಭಾಷೆ ಕನ್ನಡವೇ. ಇತರೆ ಭಾಷೆಗಳು ಜೀವನೋಪಾಯಕ್ಕಾಗಿ ಅಗತ್ಯವಾಗಬಹುದು, ಆದರೆ ಕನ್ನಡ ಭಾಷೆ ಮಾತ್ರ ಭಾವನೆಗೆ ಸಂಬಂಧಿಸಿದ್ದು ಎಂದು ಹೇಳಿದರು. ಅಂತಹ ಘಟನೆ ನಡೆದಿರುವುದು ದೃಢಪಟ್ಟರೆ, ನಾಳೆ ಬಂದು ಖಂಡನೆ ವ್ಯಕ್ತಪಡಿಸುವುದಾಗಿ ಶಾಸಕ ತಿಳಿಸಿದರು.



