ಬೆಂಗಳೂರು :- ಹೆಣ್ಮಕ್ಕಳೇ ಚೀಪ್ ಕಾಸ್ಮೆಟಿಕ್ ಬಳಸೋ ಮುನ್ನ ಎಚ್ಚರ.. ಸದ್ದಿಲ್ಲದೆ ಬರಬಹುದು ಕ್ಯಾನ್ಸರ್.. ಏನಿದು ಕ್ಯಾನ್ಸರ್ ಸ್ಟೋರಿ ತಿಳಿಯಲು ಈ ಸುದ್ದಿ ಪೂರ್ತಿ ಓದಿ..
ಹೌದು, ಕೆಲವು ಹೆಣ್ಣು ಮಕ್ಕಳಿಗೆ ಹೆಚ್ಚು ಮೇಕಪ್ ಮಾಡಿಕೊಳ್ಳೋದು ಅಂದ್ರೆ ತುಂಬಾ ಇಷ್ಟ. ಒಂದು ಹೊತ್ತಿನ ಊಟ ಬಿಟ್ಟರೂ ಮೇಕಪ್ ಬಿಡೋದಿಲ್ಲ ಎಂಬಂತೆ ಅಡಿಕ್ಟ್ ಆಗಿದ್ದಾರೆ. ಇದೀಗ ಅಂತಹ ಹೆಣ್ಣು ಮಕ್ಕಳಿಗೆ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ.
ಹೌದು, ಸಿಲಿಕಾನ್ ಸಿಟಿಯ ಬೀದಿ ಬೀದಿಯಲ್ಲಿ ಕ್ಯಾನ್ಸರ್ ಮಾರಾಟ ಮಾಡಲಾಗುತ್ತಿದೆ. ಅಯ್ಯೋ ಇದೇನು ಕ್ಯಾನ್ಸರ್ ಅಂತ ಹೇಳ್ತಿದ್ದಾರೆ ಅಂತ ಕನ್ಪ್ಯೂಸ್ ಆಗ್ಬೇಡಿ. ವಿಷಯ ತಿಳಿಯಲು ಸ್ಟೋರಿ ಕಂಪ್ಲೀಟಾಗಿ ಓದಿ. ಹೆಣ್ಣುಮಕ್ಳೆ ಚೀಪ್ ಕಾಸ್ಮೆಟಿಕ್ ಬಳಸೋ ಮುನ್ನ ಎಚ್ಚರವಾಗಿರಿ. ಸ್ವಲ್ಪ ಯಾಮಾರಿದ್ರು ಚರ್ಮ ಕ್ಯಾನ್ಸರ್ ಬರೋದು ಪಕ್ಕವಾಗಿದೆ. ಸ್ಟ್ರೀಟ್ ಶಾಪಿಂಗ್ ಮಾಡೋ ವೇಳೆ, ಕಡಿಮೆ ಬೆಲೆಗೆ ಬ್ರಾಂಡೆಡ್ ಬ್ಯೂಟಿ ಪ್ರಾಡಕ್ಟ್ ಸಿಗುತ್ತದೆ.
ಗಾಂಧಿನಗರ ಉಪ್ಪಾರಪೇಟೆ, ಮಲ್ಲೇಶ್ವರಂ , ಮೆಜೆಸ್ಟಿಕ್ ಸೇರಿದಂತೆ ಕೆಲ ಏರಿಯಾಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಬ್ರಾಂಡೆಡ್ ಹೆಸರಲ್ಲಿ ಚೀಪ್ ಬ್ಯೂಟಿ ಪ್ರಾಡಕ್ಟ್ ಗಳ ಮಾರಾಟ ಮಾಡಲಾಗುತ್ತಿದೆ.
ಇದು ಪಕ್ಕಾ ನಿಮ್ಮ ಸ್ಕಿನ್ ಹಾನಿಕಾರಕ ಅಷ್ಟೇ ಅಲ್ಲ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ. ಸ್ಟ್ರೀಟ್ ಶಾಪಿಂಗ್ ಮಾಡುವಾಗ ಸಾಕಷ್ಟು ಹೆಣ್ಣುಮಕ್ಕಳು ಕಡಿಮೆ ಬೆಲೆಯಲ್ಲಿ ಬ್ರ್ಯಾಂಡ್ ಬ್ಯೂಟಿ ಪ್ರಾಡೆಕ್ಟ್ ಸಿಗುತ್ತಿದೆ. ಅಥವಾ ಅರ್ಥಕ್ಕೆ ಅರ್ದ ಬೆಲೆಯಲ್ಲಿ ಒಳ್ಳೆ ಸೌಂದರ್ಯವರ್ಧಕ ಸಿಗುತ್ತೆ ಅನೋ ಆಸೆಯಲ್ಲಿ ಬೀದಿ ಬದಿಯಲ್ಲಿ ಮಾರಾಟಕ್ಕಿಟ್ಟಿರುವ ಕಾಜಲ್, ಫೌಂಡೇಶನ್ , ಕ್ರೀಮ್, ಲಿಪ್ ಸ್ಟಿಕ್, ಬ್ಲುಷ್ ಸೇರಿದಂತೆ ನಾನಾ ಬ್ಯೂಟಿ ಪ್ರಾಡಕ್ಟ್ ಗಳನ್ನು ಖರೀದಿ ಮಾಡುತ್ತಾರೆ..ಸದ್ಯ ಇದು ಕ್ಯಾನ್ಸರ್ ಮಾರಕ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.