ಅಸಂವಿಧಾನಿಕ ಪದ ಬಳಕೆ ಅಕ್ಷಮ್ಯ ಅಪರಾಧ: ಮುಖ್ಯಮಂತ್ರಿ ಚಂದ್ರು!

0
Spread the love

ಕೊಡಗು:- ಅಸಂವಿಧಾನಿಕ ಪದ ಬಳಕೆ ಅಕ್ಷಮ್ಯ ಅಪರಾಧ ಎಂದು ಆಪ್ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

Advertisement

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ CT ಸಿಟಿ ಅವರು ಅವಾಚ್ಯ ಪದ ಬಳಕೆ ಮಾಡಿರುವ ಆರೋಪದ ವಿಚಾರವಾಗಿ ಮಡಿಕೇರಿಯಲ್ಲಿ ಮಾತನಾಡಿದ ಅವರು, ಅಸಂವಿಧಾನಿಕ ಪದ ಬಳಕೆ ಅಕ್ಷಮ್ಯ ಅಪರಾಧ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು.

ಇನ್ನೂ ನಂತರದ ಬೆಳವಣಿಗೆ ಹಾಸ್ಯಾಸ್ಪದವಾಗಿತ್ತು. ಅವರು ತಪ್ಪು ಮಾಡಿರೋದು ನಿಜ ಹೀಗಾಗಿ ತುರ್ತಾಗಿ ಬಂಧನ ಮಾಡಬೇಕು. ಈ ತರ ಘಟನೆ ‌ನಡೆಯಬಾರದಂತೆ ಕ್ರಮ ವಹಿಸಬೇಕು.

ಘಟನೆ ಆಗಿರೋದು ಸತ್ಯ. ಅದನ್ನು‌ ಮುಚ್ಚಿಹಾಕುವ ಪ್ರಯತ್ನ ಆಗುತ್ತಿದೆ. ಇಂತಹ ಪ್ರಕರಣ ಮುಂದೆ ನಡೆಯಬಾರದು. ತನಿಖೆಯಿಂದ ಎಲ್ಲಾ ವಿಚಾರ ಬೆಳಕಿಗೆ ಬರಬೇಕು ಎಂದರು.

ಇದೇ ವೇಳೆ ಜಿಲ್ಲಾ ಪಂ,ತಾಲೂಕು ಪಂ ಚುನಾವಣೆಗೆ ಆಪ್ ಪಕ್ಷ ತಯಾರಿ ವಿಚಾರವಾಗಿ ಮಾತನಾಡಿ, ಎಲ್ಲಾ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಇದೆ. ಆಮ್ ಆದ್ಮಿ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ. ಐದು ವರ್ಷದಿಂದ ಜಿಲ್ಲಾ ಪಂ,ತಾಲೂಕು ಪಂ ಚುನಾವಣೆ ನಡೆದಿಲ್ಲ. ಅಧಿಕಾರ ವಿಕೇಂದ್ರಿಕರಣ ಹೋಗಿ ಸರ್ವಾಧಿಕಾರ‌ ಕೇಂದ್ರೀಕರಣ ಕಾಣುತ್ತಿದೆ.

ನ್ಯಾಯಾಲಯವೇ ಚುನಾವಣೆ ನಡೆಸುವಂತೆ ಸೂಚನೆ ಕೊಟ್ಟಿದೆ. ಆದಷ್ಟು ಬೇಗ ಚುನಾವಣೆ ಮಾಡಿ. ತಪ್ಪಿದ್ದಲ್ಲಿ ಆಪ್ ಪಕ್ಷ ಬೀದಿಗಿಳಿದು ಹೋರಾಟ ಮಾಡಲಿದೆ ಎಂದರು.


Spread the love

LEAVE A REPLY

Please enter your comment!
Please enter your name here