ಉತ್ತರ ಕನ್ನಡ: ಜಿಲ್ಲೆಯ ಕುಮಟಾ ತಾಲ್ಲೂಕಿನ ದೇವರ ಹಕ್ಕಲದಲ್ಲಿ ದುಷ್ಕರ್ಮಿಯೊಬ್ಬ ಮನೆಯೊಂದಕ್ಕೆ ಬೆಂಕಿ ಇಟ್ಟಿರುವ ಘಟನೆ ಜರುಗಿದೆ.
ಅದೃಷ್ಟವಶಾತ್ ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದೆ ಇದ್ದ ಕಾರಣ ಭಾರೀ ಅನಾಹುತ ತಪ್ಪಿದೆ. 18ರ ಹುಡುಗ ಈ ಕೃತ್ಯ ಎಸಗಿದ್ದಾನೆ. ದಿನಕರ್ ಎಂಬುವವರಿಗೆ ಸೇರಿದ ಮನೆ ಇದಾಗಿದೆ. ಕುಮಟಾದ ವೆಂಕಟರಮಣ ದೇವರ ಜಾತ್ರೆಗೆ ದಿನಕರ್ ಕುಟುಂಬ ತೆರಳಿತ್ತು. ಈ ವೇಳೆ ಬೆಂಕಿ ಇಡಲಾಗಿದೆ.
ಮನೆಗೆ ಬೆಂಕಿ ಹಚ್ಚುತ್ತಿದ್ದಂತೆ ನೆರೆಯವರು ಬೆಂಕಿ ನಂದಿಸಿದ್ದಾರೆ. ಆರೋಪಿಯನ್ನು ಕುಮಟಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಎಸ್ಪಿ ದೀಪನ್ , ಎಎಸ್ಪಿ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕುಮಟಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



