ವಿಜಯಸಾಕ್ಷಿ ಸುದ್ದಿ, ಗದಗ : ಮರಾಠಾ ಸಮಾಜದ ನಾಯಕ, ವಿಧಾನ ಪರಿಷತ್ ಸದಸ್ಯರಾದ ಎಮ್.ಜಿ. ಮುಳೆ ಅವರ ಜನ್ಮದಿನವನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಆಚರಿಸಲಾಯಿತು.
Advertisement
ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಮಂಜುನಾಥ ದಾಮೋದರ, ಸರಳ ಸಜ್ಜನಿಕೆಯ ರಾಜಕಾರಣಕ್ಕೆ ಹೆಸರುವಾಸಿಯಾದ ಎಮ್.ಜಿ. ಮುಳೆ ಅವರ ವಿಚಾರಧಾರೆಗಳನ್ನು ಇಂದಿನ ಯುವಕರು ಅಳವಡಿಸಿಕೊಳ್ಳುವುದು ಅವಶ್ಯವಿದೆ ಎಂದು ಹೇಳಿದರು. ಮರಾಠಾ ಸಮಾಜದ ಮುಖಂಡರಾದ ವಿನೀತ ಜಗತಾಪ ಮಾತನಾಡಿ, ಎಮ್.ಜಿ. ಮುಳೆ ಅವರು ತಮ್ಮ ಇಡೀ ಜೀವನವನ್ನು ಮರಾಠಾ ಸಮಾಜದ ಅಭಿವೃದ್ಧಿ ಮತ್ತು ಏಳಿಗೆಗೆ ಮುಡಿಪಾಗಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾರಾಯಣರಾವ್ ಗಾಯಕವಾಡ, ಮಾರುತಿ ಅರಳಿಕಟ್ಟಿ, ಈರಣ್ಣ ಪವಾರ, ಕಿರಣ ಮೇರವಾಡೆ, ಸತೀಶ ಮಾಳೋದೆ, ಕಾರ್ತಿಕ ಪಾಸ್ತೆ, ಉದಯ ವೇರ್ಣೇಕರ, ಜಂಭಣ್ಣ ಹುಡೇದ ಮುಂತಾದವರು ಉಪಸ್ಥಿತರಿದ್ದರು.