`ವಚನ ದರ್ಶನ’ ಪಾದಯಾತ್ರೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಶ್ರೀಕ್ಷೇತ್ರ ಹರ್ತಿ ಗ್ರಾಮದಲ್ಲಿ `ವಚನ ದರ್ಶನ’ ಆಧ್ಯಾತ್ಮಿಕ ಪ್ರವಚನದ ಅಂಗವಾಗಿ ಹಿರೇವಡ್ಡಟ್ಟಿ–ಮಣಕವಾಡ ದೇವಮಂದಿರ ಮಹಾಮಠದ ಪೂಜ್ಯಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಹರ್ತಿ ಗ್ರಾಮ ಸೇರಿದಂತೆ ಕಣವಿ, ಹೊಸೂರು, ಸೊರಟೂರ, ನಾಗಾವಿ, ಯಲಿಶಿರುಂದ, ಕುರ್ತಕೋಟಿ, ಚಿಂಚಲಿ ಗ್ರಾಮಗಳಲ್ಲಿ ಜನಜಾಗೃತಿ ಪಾದಯಾತ್ರೆ ನಡೆಸಿದರು.

Advertisement

ಈ ಪಾದಯಾತ್ರೆಯೂದ್ದಕ್ಕೂ ಬೆಳಗಿನ ಜಾವದಲ್ಲಿ ರಸ್ತೆಯ ತುಂಬಾ ರಂಗೋಲಿ, ಮನೆಗಳಿಗೆ ತಳಿರು-ತೋರಣ ಮತ್ತು ದೀಪಗಳಿಂದ ಶೃಂಗರಿಸಿ ಡೊಳ್ಳು, ನಂದಿಕೋಲು, ಭಜನೆ ಮೂಲಕ ಶ್ರೀಗಳನ್ನು ಸಾವಿರಾರು ಭಕ್ತರು ಭಕ್ತಿ-ಭಾವದಿಂದ ಬರಮಾಡಿಕೊಂಡು ಪಾದಯಾತ್ರೆಯನ್ನು ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ ಪೂಜ್ಯ ಶ್ರೀಗಳು ಆಶೀರ್ವಚನ ನೀಡಿ, ತೋಳ್ಬಲವನ್ನು ಶಕ್ತಿಗಾಗಿ ಪ್ರದರ್ಶನ ಮಾಡದೆ, ಭಕ್ತಿಗಾಗಿ ಪ್ರದರ್ಶನ ಮಾಡಿ ಜನರ ಮನಸ್ಸು ಗೆಲ್ಲಬೇಕು. ದುಶ್ಚಟಗಳನ್ನು ತ್ಯಜಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಸುಂದರ ಸಮಾಜ ಕಟ್ಟಬೇಕು. ತಂದೆ-ತಾಯಿ, ಗುರು-ಹಿರಿಯರನ್ನು ಗೌರವದಿಂದ ಕಾಣಬೇಕೆಂದು ನುಡಿದರು.

ಪಾದಯಾತ್ರೆ ಸಂಘಟನೆಯ ಉಸ್ತುವಾರಿ ಶಿವಲಿಂಗ ಶಾಸ್ತ್ರಿಗಳು ಸಿದ್ದಾಪೂರ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿದರು.


Spread the love

LEAVE A REPLY

Please enter your comment!
Please enter your name here