ವಿಜಯಸಾಕ್ಷಿ ಸುದ್ದಿ, ಗದಗ: ಧಾರವಾಡ ನಗರದ ಚೇತನ್ ಫೌಂಡೇಶನ್ ವತಿಯಿಂದ ಕೊಡಮಾಡುವ `ವಚನ ವೈಭವ’ ಎಂಬ ಪ್ರಶಸ್ತಿಯನ್ನು ಪುಟ್ಟರಾಜ ಹಿರೇಮಠ, ಡಾ. ಎಸ್.ಎಸ್. ರೆಡ್ಡರ ಹಾಗೂ ಡಾ. ಶಿವಾನಂದ ವೀರಯ್ಯ ಹಿರೇಮಠರಿಗೆ ನೀಡಿ ಗೌರವಿಸಲಾಯಿತು.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಬಸವರಾಜ ಭೂಸರಡ್ಡಿ, ಪೀರ್‌ಸಾಬ್ ನದಾಫ್, ಲಕ್ಕಮ್ಮನವರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು ಎಂದು ಚೇತನ್ ಫೌಂಡೇಶನ್ ಅಧ್ಯಕ್ಷರಾದ ಚಂದ್ರಶೇಖರ್ ಮಂಡಲಗಿರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



