ವಿಜಯಸಾಕ್ಷಿ ಸುದ್ದಿ, ಗದಗ: ದಕ್ಷತೆ ಮತ್ತು ಪ್ರಮಾಣಿಕತೆಗೆ ಹೆಸರಾದ ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಎಸ್.ಎಸ್. ನೀಲಗುಂದರಿಗೆ `ವೈದ್ಯವಿಭೂಷಣ’ ಪ್ರಶಸ್ತಿ ದೊರತಿರುವುದು ನಮಗೆಲ್ಲ ಸಂತಸವನ್ನುಂಟುಮಾಡಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ಕಾರ್ಯಾಧ್ಯಕ್ಷರಾದ ಸಿದ್ದಪ್ಪ ಎನ್.ಲಿಂಗದಾಳ ಹೇಳಿದರು.
ಅವರು ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದಿಂದ ವೈದ್ಯವಿಭೂಷಣ ಪ್ರಶಸ್ತಿ ಪುರಸ್ಕೃತ ಡಿ.ಎಚ್.ಒ ಡಾ. ಎಸ್.ಎಸ್. ನೀಲಗುಂದರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಅವರಿಗೆ ಮುಂದಿನ ದಿನಮಾನಗಳಲ್ಲಿ ಅತ್ಯುನ್ನತವಾದ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳು ದೊರೆಯಲೆಂದು ಶುಭ ಕೋರಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎಸ್.ಎಸ್. ನೀಲಗುಂದ, ಸಾರ್ವಾಜನಿಕರಿಗೆ ಆರೋಗ್ಯ ಇಲಾಖೆಯ ಸೇವೆಯನ್ನು ನೀಡುವಲ್ಲಿ ಇಲಾಖೆಯ ಎಲ್ಲ ನೌಕರರು ಅಧಿಕಾರಿಗಳು ಉತ್ತಮ ಕಾರ್ಯವನ್ನು ಮಾಡಿ. ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿ ಗದಗ ಜಿಲ್ಲೆಯ ಗೌರವವನ್ನು ಹೆಚ್ಚಿಸಿ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಮಲ್ಲಿಕಾರ್ಜುನ್ ಎಫ್.ಕಲಕಂಬಿ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ನಿರ್ದೇಶಕ ಅಜಯ್ ಕುಮಾರ್ ಕಲಾಲ ಡಾ. ನೀಲಗುಂದರನ್ನು ಸನ್ಮಾನಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಸಂಘದ ಗದಗ ಅಧ್ಯಕ್ಷರಾದ ಬಿ.ಸಿ. ಹಿರೇಹಾಳ, ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಡಿಗೇರ್, ಕೃಷ್ಣಾ ಗಾಡರಡ್ಡಿ, ಪ್ರಭು ಹೊನುಗುಡಿ, ಎಂ.ಎಚ್. ಕದಂಪುರ, ವೈ.ಎನ್. ಕಡೆಮನಿ, ಎಸ್‌ಎಲ್ ಕೋರಿ, ಗೂಡುನಾಯ್ಕರ್, ಎಸ್.ಎಸ್. ಕುಬಸದ ದೇವರಮನಿ ಇದ್ದರು.