ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿರವರ ೧೦೦ನೇ ಜನ್ಮದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡ್ರ, ಪ್ರಮುಖರಾದ ನಾಗರಾಜ ಕುಲಕರ್ಣಿ ಮಾತನಾಡಿ, ದೇಶಕ್ಕೆ ಅಟಲ್ ಬಿಹಾರಿ ವಾಜಪೇಯಿರವರ ಕೊಡುಗೆ ಹಾಗೂ ಬಿಜೆಪಿ ಪಕ್ಷಕ್ಕಾಗಿ ಅವರು ವಹಿಸಿದ ಶ್ರಮದ ಕುರಿತು ಮಾತನಾಡಿದರು.
ಪ್ರಮುಖರಾದ ಎಂ.ಎA. ಹಿರೇಮಠ, ರವಿ ದಂಡಿನ, ಜಗನ್ನಾಥಸಾ ಭಾಂಡಗೆ, ವಿಜಯಕುಮಾರ ಗಡ್ಡಿ ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಗದಗ ನಗರ ಮಂಡಲ ಅಧ್ಯಕ್ಷ ಅನಿಲ ಅಬ್ಬಿಗೇರಿ, ಪ್ರಮುಖರಾದ ಸುಧೀರ ಕಾಟಿಗರ, ಸಂತೋಷ ಅಕ್ಕಿ, ದೇವಪ್ಪ ಗೊಟೂರ, ಕೆ.ಪಿ. ಕೋಟಿಗೌಡ್ರ, ಬೂದಪ್ಪ ಹಳ್ಳಿ, ರಮೇಶ ಸಜ್ಜಗಾರ, ಅಮರನಾಥ ಗಡಗಿ, ಮಂಜುನಾಥ ಶಾಂತಗೇರಿ, ಮಾಂತೇಶ ಬಾತಾಖಾನಿ, ಸ್ವಾತಿ ಅಕ್ಕಿ, ಯೋಗೇಶ್ವರಿ ಭಾವಿಕಟ್ಟಿ, ವಿಶ್ವನಾಥ ಟೆಂಗಿನಕಾಯಿ, ನಾಗರಾಜ ತಳವಾರ, ಅಪ್ಪು ಕೊಟಗಿ, ಮೇಘಾ ಕೊಟ್ಟೂರ, ಬಸವರಾಜ, ಮೋಹನ ಕೋರಿ, ವಿನಾಯಕ ಹೊರಕೇರಿ, ವಿರೂಪಾಕ್ಷ ಹಸಬಿ, ವಿನೋದ ಹಂಸನೂರ ಮುಂತಾದವರಿದ್ದರು.