ವಾಲ್ಮೀಕಿ ನಿಗಮ ಹಗರಣ: ತಪ್ಪಿತಸ್ಥರಿಗೆ ಶಿಕ್ಷೆ ನಿಶ್ಚಿತ ಎಂದ CM ಸಿದ್ದರಾಮಯ್ಯ!

0
Spread the love

ಬೆಂಗಳೂರು:- ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆಗೊಳಪಡಿಸುವುದು ನಿಶ್ಚಿತ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ನಿಗಮದ ಹಣ ರಿಕವರಿಯಾಗಿರುವ ಹಣದ ಬಗ್ಗೆ ಉಂಟಾದ ಗೊಂದಲವನ್ನು ಸಿದ್ದರಾಮಯ್ಯ ನಿವಾರಿಸಿದರು. ಅಸಲಿಗೆ ಅವರು ಸದನದಲ್ಲಿ ಹೇಳಿದ್ದಕ್ಕೆ ಮತ್ತು ಪತ್ರಿಕಾ ಗೋಷ್ಠಿಯಲ್ಲಿ ನೀಡಿದ ವಿವರಣೆ ನಡುವೆ ಭಿನ್ನತೆ ಇತ್ತು. ಗೋಷ್ಟಿಯಲ್ಲಿ ಸಿಎಂ ನೀಡಿದ ಮಾಹಿತಿ ಪ್ರಕಾರ 36 ಕೋಟಿ ರೂ. ನಗದು ರಿಕವರಿಯಾಗಿದೆ ಮತ್ತು ಬ್ಯಾಂಕಲ್ಲಿರುವ ₹ 46 ಕೋಟಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಮದ್ಯದ ಅಂಗಡಿಗಳಿಗೆ ಪಾವತಿ ಆಗಿರುವ ಬಗ್ಗೆ ಕೇಳಿದಾಗ ಅವರು, ಒಟ್ಟು 217 ಖಾತೆಗಳಿವೆ ಮತ್ತು ಅವುಗಳ ಪೈಕಿ ಕೇವಲ 4 ಖಾತೆಗಳಿಂದ ಮಾತ್ರ ಲಿಕ್ಕರ್ ಶಾಪ್​ಗಳಿಗೆ ಮಾತ್ರ ಪೇಮೆಂಟ್ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here