ರಾಯಚೂರು: ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅವ್ಯವಹಾರದಲ್ಲಿ ಇಡಿ ಕೈಯಲ್ಲಿ ಇದೀಗ ಸಿಕ್ಕಿಹಾಕಿಕೊಂಡಿರುವ ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಅವರ ಮಾಜಿ ಸಹಾಯಕ ಪಂಪಣ್ಣನನ್ನು ಇಡಿ ಅಧಿಕಾರಿಗಳು ಇಂದು ವಶಕ್ಕೆ ಪಡೆದುಕೊಂಡಿದ್ದಾರೆ. ಬಸನಗೌಡ ದದ್ದಲ್ ನಿವಾಸದ ಮೇಲೆ ದಾಳಿ ಮಾಡಿದ ಬಳಿಕ ಅವರ ಮಾಜಿ ಆಪ್ತ ಸಹಾಯಕರಾಗಿದ್ದ ಪಂಪಣ್ಣ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ನಿನ್ನೆಯಿಂದಲೇ ಪಂಪಣ್ಣ ನಿವಾಸದಲ್ಲಿ ದಾಖಲೆಗಳನ್ನು ಪರಿಶೀನಲೆ ನಡೆಸಿದ್ದಾರೆ.
ಆದ್ರೆ, ಬೇರೆ ದಾಖಲೆಗಳು ಪತ್ತೆಯಾಗಿದ್ದರಿಂದ ಸುದೀರ್ಘ 24 ಗಂಟೆಗಳ ಪರಿಶೀಲನೆ ನಂತರ ರಾಯಚೂರಿನ ರಾಯಲ್ಫೋರ್ಟ್ ಅಪಾರ್ಟ್ಮೆಂಟ್ನಲ್ಲಿ ಪಂಪಣ್ಣನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಿನ್ನೆಯಿಂದಲೇ ಇಡೀ ಅಧಿಕಾರಿಗಳು, ರಾಯಚೂರು ಮತ್ತು ಬೆಂಗಳೂರಿನಲ್ಲಿರುವ ಬಸನಗೌಡ ದದ್ದಲ್ ನಿವಾಸದಲ್ಲಿ ದಾಖಲೆಗಳನ್ನು ಪರಿಶೀನಲೆ ನಡೆಸಿದ್ದಾರೆ. ಈ ವೇಳೆ ಒಂದೊಂದೆ ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇದೀಗ ಪಂಪಣ್ಣನನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.