ಮೌಲ್ಯಗಳು ಸಮತೋಲಿತ ಜೀವನಕ್ಕೆ ಸಹಕಾರಿ

0
filter: 0; fileterIntensity: 0.0; filterMask: 0; captureOrientation: 0; runfunc: 0; algolist: 0; multi-frame: 1; brp_mask:0; brp_del_th:0.0000,0.0000; brp_del_sen:0.0000,0.0000; motionR: 0; delta:null; module: photo;hw-remosaic: false;touch: (-1.0, -1.0);sceneMode: 12582912;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗಮಾನವೀಯ ಮೌಲ್ಯಗಳು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗ. ಮಕ್ಕಳನ್ನು ಭವಿಷ್ಯತ್ತಿನ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವುದರೊಂದಿಗೆ ಪರಿಸರದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಸಹಾಯವಾಗುತ್ತವೆ. ಮಾನವೀಯ ಮೌಲ್ಯಗಳು ವಿದ್ಯಾರ್ಥಿಗಳಿಗೆ ಸಮತೋಲಿತ ಜೀವನ ನಡೆಸಲು ಅತ್ಯಂತ ಸಹಕಾರಿ ಎಂದು ವೇ.ಮೂ. ಶಂಭುಲಿಂಗಯ್ಯ ಕಲ್ಮಠ ಹೇಳಿದರು.

Advertisement

ಅವರು ಶುಕ್ರವಾರ ಗದುಗಿನ ಗಂಗಿಮಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗದಗ ಜಿಲ್ಲಾ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆಯಿಂದ ಜರುಗಿದ ಅಮೃತ ಭೋಜನ-ಜ್ಞಾನಸಿಂಚನ ಮಾಲಿಕೆ-17ರಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಕ್ಕಳಿಗೆ ಹಿತನುಡಿಗಳನ್ನು ಹೇಳಿದರು.

ಸಹಾನುಭೂತಿ, ಪ್ರಾಮಾಣಿಕತೆ, ಗೌರವ ಹಾಗೂ ಜವಾಬ್ದಾರಿಗಳು ಉತ್ತಮ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಸಹಕಾರಿಯಾಗಿವೆ. ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳಿಗೆ ಉತ್ತಮ ವ್ಯಕ್ತಿತ್ವ ನಿರ್ಮಾಣದ ಮಾದರಿ ನಡಾವಳಿಗಳನ್ನು ಮಕ್ಕಳಿಗೆ ತಿಳಿಸಿ ಹೇಳಬೇಕು ಹಾಗೂ ವರ್ಗಕೋಣೆಗಳಲ್ಲಿ ಮೌಲ್ಯಗಳ ಕುರಿತಾಗಿ ಚರ್ಚೆ- ಸಂವಾದಗಳನ್ನು ನಡೆಸುವುದರೊಂದಿಗೆ ಮಕ್ಕಳು ಇದರಲ್ಲಿ ಭಾಗಿಗಳಾಗಬೇಕು. ಅಂದಾಗ ಮಕ್ಕಳು ಉತ್ತಮ ಬದುಕಿನ ದಾರಿಯನ್ನು ಈಗಲೇ ರೂಪಿಸಿಕೊಳ್ಳುತ್ತಾರೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಲಿತಾ ಉಮನಾಬಾದಿ ಮಾತನಾಡಿ, ಸಾಹಿತ್ಯ ಹಾಗೂ ಕಲೆಗಳ ಮೂಲಕ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಶಾಲೆ ಹಾಗೂ ಮನೆಯಲ್ಲಿಯೂ ನಡೆಯಬೇಕು. ಬಾಲ್ಯವು ಸುಂದರಮಯವಾಗಿ ಕಳೆಯಬೇಕಾಗಿರುವುದರಿಂದ ಈಗಲೇ ವಿದ್ಯಾರ್ಥಿಗಳು ಹಿರಿಯರ ಅನುಭವಗಳೊಂದಿಗೆ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಮೈನುದ್ದಿನ ಹಣಗಿ ಮಾತನಾಡಿ, ಆಸಕ್ತಿದಾಯಕ ಹಾಗೂ ಅರ್ಥಪೂರ್ಣ ಕಲಿಕೆಯು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತವೆ. ಸಮಾಜ ಸೇವೆಯಲ್ಲಿ ಮಕ್ಕಳು ತಮ್ಮನ್ನೇ ತಾವು ತೊಡಗಿಸಿಕೊಳ್ಳುವ ಮೂಲಕ ಕಲಿತ ಶಾಲೆಗೂ ಹೆತ್ತವರಿಗೂ ಕೀರ್ತಿ ತರಬೇಕು. ಸಮಾಜದಲ್ಲಿನ ಮಾನವೀಯತೆಯನ್ನು ಮೌಲ್ಯವಾದ ಮೌಲ್ಯವೆಂದೇ ಪರಿಗಣಿಸಬೇಕು. ಸತ್ಯ, ಪ್ರೀತಿ, ಕ್ಷಮೆ, ದಯೇ ಮುಂತಾದ ಮಾನವ ಮೌಲ್ಯಗಳನ್ನು ಗುರುತಿಸುವ ಮೂಲಕ ನಾವು ಮಾನವ ಏಕತೆಯನ್ನು ಸಾಧಿಸುವ ಪ್ರಯತ್ನ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯೆ ಆರ್.ಬಿ. ಸಂಕಣ್ಣವರ ಮಾತನಾಡಿ, ವಿದ್ಯಾರ್ಥಿಗಳು ಓದುವ ಮತ್ತು ಬರೆಯುವ ಜ್ಞಾನದೊಂದಿಗೆ ಬದುಕಿಗೆ ಅಗತ್ಯವಾದ ಅರಿವು-ಅನುಭವಗಳನ್ನು ರೂಢಿಸಿಕೊಂಡು ಬೆಳೆಯಬೇಕು. ಕದಳಿಶ್ರೀ ವೇದಿಕೆಯು ಮಕ್ಕಳಿಗೆ ಅಮೃತಭೋಜನದೊಂದಿಗೆ ಜ್ಞಾನ ಸಿಂಚನ ನೀಡುವಂತಹ ಉತ್ತಮ ಮೌಲ್ಯಾಧಾರಿತ ಕಾರ್ಯಕ್ರಮವನ್ನು ನಡೆಸುತ್ತಿದೆ. ಇದರಿಂದ ಮಕ್ಕಳಿಗೆ ಹೊಸ ಅನುಭವ ಉಂಟಾಗಿ ಕಲಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಮೂಡುತ್ತದೆ ಎಂದರು.

ಕವಿತಾ ಬೇಲೇರಿ ಸ್ವಾಗತಿಸಿದರು. ವಿ.ಆರ್. ಹಾಂಶಿ ಪರಿಚಯಿಸಿದರು. ಜಿ.ಎಸ್. ಬೆಳಹಾರ ನಿರೂಪಿಸಿದರು. ಐ.ಡಿ. ಕಬ್ಬೇರಹಳ್ಳಿ ವಂದಿಸಿದರು. ಕಾರ್ಯಕ್ರಮದಲ್ಲಿ ಡಿ.ಎಸ್. ಮಿಶೇನವರ, ಆರ್.ಡಿ. ಮಗಜಿ, ಆರ್.ಬಿ. ಹಾದಿಮನಿ, ಸುನೀತಾ ರಾಮದುರ್ಗ, ದೀಪಾ ಮುಂಡೇವಾಡಿ, ಶಬಾನಾ ಮುಲ್ಲಾ, ಉಮಾ ವಡೆಪಲ್ಲೆ ಮುಂತಾದವರು ಉಪಸ್ಥಿತರಿದ್ದರು.

ಚಿಂತಕಿ ಸುವರ್ಣ ವಸ್ತ್ರದ ಮಾತನಾಡಿ, ಸಮಾಜದಲ್ಲಿ ಮಾನವೀಯ ಮೌಲ್ಯಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಇವು ಬದುಕಿಗೆ ಗಟ್ಟಿಯಾದ ಅಡಿಪಾಯವನ್ನು ಹಾಕುತ್ತವೆ. ಎಲ್ಲ ಧರ್ಮಗಳ ಪವಿತ್ರ ಗ್ರಂಥಗಳು ಉತ್ತಮ ಜೀವನದ ಮೌಲ್ಯಗಳ ಕುರಿತು ಹೇಳುತ್ತವೆ. ಸಾಂಪ್ರಾದಾಯಕ ಪದ್ಧತಿಗಳು ಮತ್ತು ಪರಂಪರೆಗಳ ಕುರಿತಾಗಿ ಮೌಲ್ಯ ಶಿಕ್ಷಣದ ಬೋಧನೆಯೊಂದಿಗೆ ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.


Spread the love

LEAVE A REPLY

Please enter your comment!
Please enter your name here