ಅರಣ್ಯೀಕರಣ ನಮ್ಮೆಲ್ಲರ ಆದ್ಯತೆಯಾಗಲಿ : ಕಳಕಪ್ಪ ಬಂಡಿ

0
Vanamahotsava programme
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಮುಂದಿನ ಪೀಳಿಗೆಗೆ ಉತ್ತಮ ಆಮ್ಲಜನಕ ಜತೆಗೆ ಪರಿಸರ ಉಳಿಸಲು ಸಸಿಗಳನ್ನು ನೆಟ್ಟು ಅರಣ್ಯೀಕರಣ ನಿರ್ಮಾಣಕ್ಕೆ ಮುಂದಾಗುವುದು ನಮ್ಮ ಕರ್ತವ್ಯವಾಗಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.

Advertisement

ಸ್ಥಳೀಯ ರೋಣ ರಸ್ತೆಯ ನಿವಾಸದಲ್ಲಿ ಶುಕ್ರವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಉದ್ದೇಶಿಸಿ ಅವರು ಮಾತನಾಡಿದರು.

ಕಾಡು ಉಳಿದರೆ, ನಾಡು ಉಳಿದಂತೆ. ಪ್ರತಿಯೊಬ್ಬರಿಗೆ ಶಿಕ್ಷಣ, ಆರೋಗ್ಯ ಹಾಗೂ ಅಂತಸ್ತು ಜೀವನದಲ್ಲಿ ಬದುಕು ನಡೆಸಲು ಎಷ್ಟು ಮುಖ್ಯವೋ ಅದಕಿಂತಲೂ ಮುಖ್ಯವಾದದ್ದು ಎಂದರೆ ಉತ್ತಮ ಪರಿಸರ ಕಾಪಾಡಿಕೊಳ್ಳುವುದು. ಕೃತಕ ಆಮ್ಲಜನಕ ಉತ್ಪಾದನೆ ಸಾಧ್ಯವಿಲ್ಲ. ಹೀಗಾಗಿ ಪ್ರಕೃತಿ ದತ್ತವಾಗಿ ನಮಗೆ ವರದಂತೆ ಸಿಗುವ ಆಮ್ಲಜನಕವನ್ನು ಪಡೆಯಲು ನಾವು ಇಂದು ಸಸಿಗಳನ್ನು ನೆಡುವುದರ ಜತೆಗೆ ಗಿಡಗಳನ್ನು ರಕ್ಷಿಸುವ ಮೂಲಕ ಪರಿಸರದಲ್ಲಿ ಸಮತೋಲವನ್ನು ಕಾಡಿಕೊಳ್ಳಲು ಮುಂದಾಗಬೇಕು ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ ಮಾತನಾಡಿದರು.

ಪುರಸಭೆ ಹಂಗಾಮಿ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ, ಪುರಸಭೆ ಸದಸ್ಯರಾದ ರೂಪೇಶ ರಾಠೋಡ, ಮುದಿಯಪ್ಪ ಮುಧೋಳ, ಯಮನೂರ ತಿರಕೋಜಿ ಹಾಗೂ ಸಿದ್ದಣ್ಣ ಬಳಿಗೇರ, ಅಶೋಕ ವನ್ನಾಲ, ದುರಗಪ್ಪ ಮುಧೋಳ, ಬುಡ್ಡಪ್ಪ ಮೂಲಿಮನಿ ಸೇರಿ ಇತರರು ಇದ್ದರು.


Spread the love

LEAVE A REPLY

Please enter your comment!
Please enter your name here