ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ: ಖರೀದಿಗೆ ಮುಗಿಬಿದ್ದ ಗ್ರಾಹಕರು, ಮಾರ್ಕೆಟ್ ನಲ್ಲಿ ಜನವೋ ಜನ!

0
Spread the love

ಬೆಂಗಳೂರು:- ವರಮಹಾಲಕ್ಷ್ಮಿ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಮಾರ್ಕೆಟ್​​ನಲ್ಲಿ ಖರೀದಿ ಭರಾಟೆ ಜೋರು ನಡೆದಿದೆ. ಆದರೆ ಇದಕ್ಕೆ ಟ್ರಾಫಿಕ್ ಜಾಮ್​ ಬಿಸಿ ತಟ್ಟಿದೆ.

Advertisement

ನಾಳೆ ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆಯಲ್ಲಿ ಮಾರ್ಕೆಟ್​ಗೆ ಭಾರೀ ಪ್ರಮಾಣದಲ್ಲಿ ವ್ಯಾಪಾರಸ್ಥರು ಲಗ್ಗೆ ಇಟ್ಟಿದ್ದಾರೆ. ಇದರಿಂದ ಮಾರ್ಕೆಟ್​ ಸುತ್ತಮುತ್ತ ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್​..ಜಾಮ್​ ಆಗಿದೆ. ಕೇವಲ ಮಾರ್ಕೆಟ್​ನಲ್ಲಿ ಮಾತ್ರ ಟ್ರಾಫಿಕ್ ಜಾಮ್ ಆಗಿಲ್ಲ. ಕೆಆರ್ ಸರ್ಕಲ್​ನಿಂದ ಕಾರ್ಪೋರೇಷನ್, ಟೌನ್ ಹಾಲ್, ಎಸ್​​​ಪಿ ರೋಡ್, ಮಾರ್ಕೆಟ್​ವರೆಗೆ ಟ್ರಾಫಿಕ್ ಜಾಮ್ ಆಗಿದೆ. ಕೆಂಗೇರಿ ಕಡೆಯಿಂದ ಬರುವ ರಸ್ತೆಯೂ ಟ್ರಾಫಿಕ್​ನಿಂದ ಕೂಡಿತ್ತು.

ರಾತ್ರಿ ಮಳೆ ಬಂದಿತ್ತು. ಜಡಿ ಮಳೆ ಬೆಳಗಿನ ಜಾವ ಕೂಡ ಹಾಗೆ ಇತ್ತು. ಆದರೂ ಜನರು ದೊಡ್ಡ ಸಂಖ್ಯೆಯಲ್ಲಿ ಮಾರ್ಕೆಟ್​ಗೆ ಲಗ್ಗೆ ಇಟ್ಟಿದ್ದಾರೆ. ದೇವರಿಗೆ ಬೇಕಾದ ವಸ್ತುಗಳು, ಹೂವು, ಹಣ್ಣು, ತರಕಾರಿ, ಬಾಳೆ ಎಲೆ, ಬಾಳೆ ದಿಂಬು, ಸಿಹಿ ತಿನಿಸು ಹಾಗೂ ಕೆಲವು ವಸ್ತುಗಳನ್ನು ಖರೀದಿ ಮಾಡಲು ಜನರು ಮುಗಿ ಬಿದ್ದಿದ್ದಾರೆ. ಇದರಿಂದ ಬೆಳ್ಳಂಬೆಳಗ್ಗೆಯೇ ಎಲ್ಲರಿಗೂ ಟ್ರಾಫಿಕ್ ಬಿಸಿ ತಟ್ಟಿದೆ.

ಈ ಎಲ್ಲದರ ನಡುವೆ ಮಾರ್ಕೆಟ್​ನಲ್ಲಿ ಯಾವುದೇ ವಸ್ತು ಮುಟ್ಟಲು ಹೋದರೆ ಕೈ ಸುಡುವಂತಾಗಿದೆ. ಅಂದರೆ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು ಸೇರಿ ಪ್ರತಿ ವಸ್ತುವಿನ ಬೆಲೆ ಏರಿಕೆ ಆಗಿದೆ.


Spread the love

LEAVE A REPLY

Please enter your comment!
Please enter your name here