ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶ್ರಾವಣ ಮಾಸದ ಕಡೆಯ ಸೋಮವಾರವಾದ ಆಗಸ್ಟ್ 18ರಂದು ಶಿರಹಟ್ಟಿ ತಾಲೂಕಿನ ಸುಕ್ಷೇತ್ರ ವರವಿ ಶ್ರೀ ಮೌನೇಶ್ವರರ ಜಾತ್ರೆಯು ನಡೆಯಲಿದೆ ಎಂದು ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೋಹನ ನರಗುಂದ ಹೇಳಿದರು.
ಅವರು ಗುರುವಾರ ಶಿರಹಟ್ಟಿಯ ಪ್ರವಾಸಿಮಂದಿರದಲ್ಲಿ ವರವಿ ಶ್ರೀ ಮೌನೇಶ್ವರರ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಆ.18ರ ಸೋಮವಾರ ಬೆಳಿಗ್ಗೆ 6.15ಕ್ಕೆ ಧ್ವಜಾರೋಹಣ, 9ರಿಂದ 11ರವರೆಗೆ ಮಹಾಯಜ್ಞ, ಮಧ್ಯಾಹ್ನ 12.15ಕ್ಕೆ ಜಾತ್ರಾ ಮಹೋತ್ಸವದ ಉದ್ಘಾಟನಾ ಸಮಾರಂಭ ನೆರವೇರಲಿದೆ. ಸಾನ್ನಿಧ್ಯವನ್ನು ಕ್ಷೇತ್ರ ಮೌನೇಶ್ವರ ಸ್ವಾಮೀಜಿ ವಹಿಸಲಿದ್ದು, ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಮೋಹನ ನರಗುಂದ ವಹಿಸುವರು. ಉದ್ಘಾಟನೆಯನ್ನು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ನೆರವೇರಿಸುವರು. ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಗಂಗಣ್ಣ ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ವಿಶ್ವನಾಥ ಕಪ್ಪತ್ತನವರ, ನಿವೃತ್ತ ಎಸ್‌ಪಿ ಎ.ಆರ್. ಬಡಿಗೇರ, ತಹಸೀಲ್ದಾರ ಕೆ.ರಾಘವೇಂದ್ರರಾವ್, ಸಿಪಿಐ ನಾಗರಾಜ ಮಾಢಳ್ಳಿ, ಪಿಎಸ್‌ಐ ಚನ್ನಯ್ಯ ದೇವೂರ ಆಗಮಿಸುವರು.
ವಿಶೇಷ ಆಹ್ವಾನಿತರಾಗಿ ಹಿರಿಯ ಸಾಹಿತಿ ಡಿ.ವಿ. ಬಡಿಗೇರ, ಬೆಂಗಳೂರಿನ ಮಂಚನಹಳ್ಳಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಧ್ಯಕ್ಷ ಸರ್ವೆಶ ಆಚಾರ, ವಿಶ್ವಕರ್ಮ ಸಮಾಜದ ಮುಖಂಡ ಈಶ್ವರ ಹೊಸಕೋಟಿ, ಖಾದಿ ಆಶ್ರಮದ ಮುಖ್ಯಸ್ಥ ಶಿವಪ್ರಸಾದ ಉಪಸ್ಥಿತರಿರಲಿದ್ದಾರೆ. ಸಂಜೆ 5.15ಕ್ಕೆ ರಥೋತ್ಸವ, 7.15ರಿಂದ ಶಹಪೂರದ ಕಾಳಹಸ್ತೇಂದ್ರ ಮಹಾಸ್ವಾಮೀಜಿಗಳಿಂದ ಶ್ರೀ ಮೌನೇಶ್ವರ ಲೀಲಾ ವಿಲಾಸ ಪ್ರವಚನ, ರಾತ್ರಿ 8.15ಕ್ಕೆ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಮದು ತಿಳಿಸಿದರು.
ಆ.19ರ ಬೆಳಿಗ್ಗೆ 11.30ಕ್ಕೆ ಧಾರ್ಮಿಕ ಸಭೆ, ಮಧ್ಯಾಹ್ನ 4 ಗಂಟೆಗೆ ಕಡುಬಿನ ಕಾಳಗ ವರವಿಯ ಮೌನೇಶ್ವರ ಸ್ವಾಮೀಜಿಗಳಿಂದ, ಸಂಜೆ 6ರಿಂದ ಧಾರ್ಮಿಕ ಸಭೆ-ಶೈಕ್ಷಣಿಕ ವಿಚಾರಗಳು ಹಾಗೂ ಶ್ರೀ ಮೌನೇಶ್ವರ ಲೀಲಾ ವಿಲಾಸ ಪ್ರವಚನ, ರಾತ್ರಿ 8ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಆ.20ರಂದು ಪಾಲಕಿ ಛಬ್ಬಿಗೆ ಹೋಗಿ ಬರುವುದು, ಬೆಳಿಗ್ಗೆ 9.15ರಿಂದ ಸಾಮೂಹಿಕ ಉಪನಯನ, ಸಂಜೆ 6ರಿಂದ ಧಾರ್ಮಿಕ ಸಭೆ ಹಾಗೂ ಶ್ರೀ ಮೌನೇಶ್ವರ ಲೀಲಾ ವಿಲಾಸ ಪ್ರವಚನ, ಆ.21ರಂದು ಪಾಲಕಿ ಅಲಾವಿ ಗುಡ್ಡಕ್ಕೆ ಹೋಗಿ ಬರುವುದು ಹಾಗೂ ಪುರವಂತರ ಸೇವೆ, ಆ.22ರಂದು ಮಹಾಪ್ರಸಾದ, ಮಧ್ಯಾಹ್ನ 3 ಗಂಟೆಗೆ ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭ, ದಾನಿಗಳಿಗೆ ಸನ್ಮಾನ ಹಾಗೂ ಪೂಜಾಫಲ ಲೀಲಾವು ನಡೆಯುವುದು.
ಸಾನ್ನಿಧ್ಯವನ್ನು ವರವಿಯ ಮೌನೇಶ್ವರ ಸ್ವಾಮೀಜಿ, ಶಿರಹಟ್ಟಿಯ ಜ.ಫ. ದಿಂಗಾಲೇಶ್ವರ ಸ್ವಾಮೀಜಿ, ಅಣ್ಣಿಗೇರಿಯ ಶಿವಕುಮಾರ ಸ್ವಾಮೀಜಿ, ಅಧ್ಯಕ್ಷೆಯನ್ನು ಮೋಹನ ನರಗುಂದ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಘನ ಉಪಸ್ಥಿತಿ ವಹಿಸುವರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಗೌರವ ಉಪಸ್ಥಿತಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಶಾಸಕ ಡಾ. ಚಂದ್ರು ಲಮಾಣಿ ಮುಂತಾದವರು ಉಪಸ್ಥಿತರಿಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಚಂದ್ರಕಾಂತ ಸೋನಾರ, ಆರ್.ವಿ. ಕಮ್ಮಾರ, ಬಸಪ್ಪ ಬಡಿಗೇರ, ವಿ.ಎಂ. ಕೊಟ್ರೇಶ್ ಆಚಾರ, ನಿರಂಜನ ಬಡಿಗೇರ, ಮಹೇಶ ಹುಲಬಜಾರ, ಸೋಮನಾಥ ಕುಂದನಗಾರ, ಈರಪ್ಪ ಬಡಿಗೇರ, ಹೂವಪ್ಪ ಸೊರಟೂರ, ಮೌನೇಶ ಬಡಿಗೇರ, ನಾರಾಯಣ ಸಿಂಗಟಾಲೂರ, ಡಿ.ಎಚ್. ಚಿದಾನಂದ, ವೀರಪ್ಪ ಪತ್ತಾರ, ವಾಸಣ್ಣ ನರಗುಂದಕರ ಮುಂತಾದವರು ಉಪಸ್ಥಿತರಿದ್ದರು.
ರಾಜ್ಯ ಹಾಗೂ ಹೊರರಾಜ್ಯಗಳಿಂದ ಮತ್ತು ನೆರೆಯ ಜಿಲ್ಲೆಗಳಿಂದ ಬರುವ ಭಕ್ತರ ಅನುಕೂಲಕ್ಕಾಗಿ ವಿಶೇಷ ಬಸ್ ಸೇವೆ ಲಭ್ಯವಿದೆ. ಭಕ್ತರಿಗೆ ಅಗತ್ಯ ಮೂಲಸೌಲಭ್ಯವನ್ನು ಕಮಿಟಿ ವತಿಯಂದ ಮಾಡಲಾಗುತ್ತಿದೆ ಎಂದು ಮೋಹನ ನರಗುಂದ ತಿಳಿಸಿದರು.