ಮಲೆನಾಡಿನಲ್ಲಿ ವರುಣಾರ್ಭಟ: ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳ

0
Spread the love

ಶಿವಮೊಗ್ಗ: ಜಲಾಶಯಗಳ ಆಗರವೆಂದೇ ಖ್ಯಾತಿ ಪಡೆದಿರುವ ಮಲೆನಾಡಿನಲ್ಲಿ ಕಳೆದ 24 ಗಂಟೆಯಿಂದ ಎಡೆಬಿಡದೆ ಮಳೆಯಾಗುತ್ತಿದೆ. ಮಳೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚತೊಡಗಿದೆ. ಭದ್ರಾ ಡ್ಯಾಂಗೆ ಕಳದ 24 ಗಂಟೆಗಳಲ್ಲಿ 16041 ಕ್ಯೂಸೆಕ್ಸ್‌ ನೀರು ನಿರಂತರವಾಗಿ ಹರಿದು ಬರುತ್ತಿದೆ. ಜಲಾಶಯದಿಂದ 162 ಕ್ಯುಸೆಕ್ಸ್‌ ನೀರು ಹೊರಕ್ಕೆ ಬಿಡಲಾಗುತ್ತಿದೆ.

Advertisement

ನಿನ್ನೆ ಇದ್ದ ಒಳಹರಿವಿಗಿಂತಲೂ ಇವತ್ತಿನ ಪ್ರಮಾಣ ಹೆಚ್ಚಾಗಿದೆ. ನಿನ್ನೆ ಭದ್ರಾ ಜಲಾಶಯಕ್ಕೆ 14570 ಕ್ಯೂಸೆಕ್ ನೀರು ಹರಿದು ಬಂದಿತ್ತು. ಜಲಾಶಯದ ಮಟ್ಟ 139.3 ಅಡಿಯಷ್ಟಿತ್ತು. ಇವತ್ತು ಜಲಾಶಯದ ಮಟ್ಟ 141 ಅಡಿಯಷ್ಟಿದೆ. ಶರಾವತಿ ಕಣಿವೆ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾ ಗುತ್ತಿರುವ ಹಿನ್ನಲೆಯಲ್ಲಿ ಶರಾವತಿ ನದಿಗೆ ಜೀವ ಕಳೆ ಬಂದಿದ್ದು, ಜೋಗದ ಸೊಬಗು ಇಮ್ಮಡಿಗೊಂಡಿದೆ.. ಜೋಗ ಜಲಪಾತ ವೀಕ್ಷಿಸಲು ಇಂದು ಪ್ರವಾಸಿಗರ ದಂಡೇ ಜೋಗದತ್ತ ಮುಖಮಾಡಿದೆ.


Spread the love

LEAVE A REPLY

Please enter your comment!
Please enter your name here