ಸಂತಾನಹರಣ ಶಸ್ತ್ರ ಚಿಕಿತ್ಸೆ ಪಾಕ್ಷಿಕ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪುರುಷರ ಸಂತಾನಹರಣ ಶಸ್ತ್ರಚಿಕಿತ್ಸೆ ಪಡೆಯುವುದರ ಮೂಲಕ ಸುಖಕರವಾದ ಜೀವನ ನಡೆಸಬಹುದು ಎಂದು ಸ್ತ್ರೀ ರೋಗ ತಜ್ಞರಾದ ಡಾ. ಉಮೇಶ ಕೆಳಗಿನಮನಿ ಹೇಳಿದರು.

Advertisement

ಅವರು ಪಟ್ಟಣದಲ್ಲಿ ನೋ ಸ್ಕಾಲ್‌ಫೆಲ್ ವ್ಯಾಸೆಕ್ಟಮಿ ಪಾಕ್ಷಿಕ ಆಚರಣೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ, ಗಾಯವಿಲ್ಲದ, ಹೊಲಿಗೆ ಇಲ್ಲದೆ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು. ನೋ ಸ್ಕಾಲ್‌ಫೆಲ್ ವ್ಯಾಸೆಕ್ಟಮಿ ಒಂದು ಸುಧಾರಿತ ಮತ್ತು ಬಹಳ ಉತ್ತಮವಾದ ಶಸ್ತçಚಿಕಿತ್ಸಾ ವಿಧಾನವಾಗಿದ್ದು, ಇತ್ತೀಚೆಗೆ ದೇಶದಲ್ಲಿ ಈ ಚಿಕಿತ್ಸಾ ವಿಧಾನ ಆಳವಡಿಸಿಕೊಳ್ಳಲಾಗಿದೆ. ಇದು ಸಂಪೂರ್ಣ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.

ನವೆಂಬರ್ 21ರಿಂದ 27ರವರೆಗೆ ಜಾಗೃತಿ ಸಪ್ತಾಹ ಕಾರ್ಯಕ್ರಮ ನಡೆಸಿದ್ದು, ನ.28ರಿಂದ ಡಿಸೆಂಬರ್ 4ರವರೆಗೆ ಶಸ್ತ್ರ ಚಿಕಿತ್ಸೆ ಕ್ಯಾಂಪ್ ನಡೆಯಲಿದೆ. ಪುರುಷರು ಇದರ ಸದುಪಯೋಗ ಪಡೆದುಕೊಳ್ಳುವಂತೆ  ಹಿರಿಯ ಅರೋಗ್ಯ ನಿರೀಕ್ಷಕ ಡಾ. ಬಿ.ಎಸ್. ಹಿರೇಮಠ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ದಂತ ವೈದ್ಯ ಡಾ. ಪ್ರವೀಣ್ ಸಜ್ಜನ, ಡಾ. ಎಫ್.ಬಿ. ಹೂಗಾರ, ಡಾ. ಪ್ರಕಾಶ ಕರ್ಜಗಿ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here