ಕಾಯಿಪಲ್ಲೆ ಮಾರುಕಟ್ಟೆ ಮಳಿಗೆಗಳಿಗೆ ಬೀಗ

0
vegetable market stalls closed
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಿರಹಟ್ಟಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿಯ ಕಾಯಿಪಲ್ಲೆ ಮಾರುಕಟ್ಟೆಯ 5 ಮಳಿಗೆಗಳಿಗೆ ಗುರುವಾರ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಬೀಗ ಹಾಕಿದ್ದಾರೆ.

Advertisement

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಸಿದ್ದರಾಯ ಕಟ್ಟಿಮನಿ, ಕಳೆದ 3 ವರ್ಷಗಳಿಂದ ಕಾಯಿಪಲ್ಲೆ ಮಾರುಕಟ್ಟೆಯ 5 ಮಳಿಗೆಗಳ ಬಾಡಿಗೆ ಬಾಕಿಯಿತ್ತು. ಹಲವು ಬಾರಿ ನೋಟೀಸ್ ಮತ್ತು ಮೌಖಿಕವಾಗಿ ತಿಳಿಸಿದರೂ ಸಹ ಬಾಕಿ ಹಣ ತುಂಬದೇ ಇರುವುದರಿಂದ ಬೀಗ ಹಾಕಲಾಗಿದೆ. ಪಟ್ಟಣ ಪಂಚಾಯತ ಆದಾಯ ಕುಂಠಿತವಾಗುತ್ತಿರುವುದಕ್ಕೆ ಈ ಕ್ರಮ ಅನುಸರಿಸಲಾಗಿದ್ದು, ಉಳಿದಂತೆ ಪಟ್ಟಣ ಪಂಚಾಯತ ಮಳಿಗೆಗಳನ್ನು ಪಡೆದುಕೊಂಡವರು ನಿಯಮಾನುಸಾರ ಮಳಿಗೆಗಳನ್ನು ಉಪಯೋಗಿಸಬೇಕು. ಕಾಲಕಾಲಕ್ಕೆ ಪಟ್ಟಣ ಪಂಚಾಯತಿಗೆ ತುಂಬಬೇಕಾದ ಹಣವನ್ನು ತುಂಬಬೇಕೆಂದು ಹೇಳಿದರು.


Spread the love

LEAVE A REPLY

Please enter your comment!
Please enter your name here