ಬೆಂಗಳೂರು: ನಗರದಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಸೀಸಾ (ಲೆಡ್) ಮತ್ತು ಕೀಟನಾಶಕ ಅವಶೇಷಗಳು ಪತ್ತೆಯಾಗಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ತೋರಿಸಿದೆ. 72 ಮಾದರಿಗಳ ಪರಿಶೀಲನೆೆಯಲ್ಲಿ 10 ಮಾದರಿಗಳಲ್ಲಿ ಕೀಟನಾಶಕ ಅವಶೇಷಗಳು ಕಂಡುಬಂದಿದ್ದು, ಕೆಲ ತರಕಾರಿಗಳಲ್ಲಿ ಸೀಸದ ಪ್ರಮಾಣ ಮಿತಿಗಿಂತ ಹೆಚ್ಚು 1.75 ಎಂಜಿ/ಕೆಜಿ ತಲುಪಿದೆ.
ಮಣ್ಣು ಕೂಡ ಪರಿಶೀಲನೆಗೆ ಒಳಪಟ್ಟಿದ್ದು, ಕೋಲಾರ, ಚಿಕ್ಕಬಳ್ಳಾಪುರ, ನೆಲಮಂಗಲದ ಹೊಲಗಳಿಂದ ಸಂಗ್ರಹಿಸಿದ 23 ಮಾದರಿ ಮಣ್ಣು ಕಲುಷಿತವಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಜನರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಿತ್ತು.
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಜಂಟಿ ಸಮಿತಿ ಸಲ್ಲಿಸಿದ ವರದಿ ಹೇಳಿದ್ದು, ನಗರದಲ್ಲಿ ಮಾರಾಟವಾಗುತ್ತಿರುವ ಕೆಲವು ತರಕಾರಿಗಳು ಜನರ ಆರೋಗ್ಯಕ್ಕೆ ಅಪಾಯಕಾರಿಯಾಗಿವೆ. ಸಾರ್ವಜನಿಕರು ಎಚ್ಚರಿಕೆಯಿಂದ ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸುವಂತೆ ಸೂಚಿಸಲಾಗಿದೆ.



