ಹಸಿರಿನಿಂದ ಕಂಗೊಳಿಸುತ್ತಿದೆ ಸಸ್ಯ ಕಾಶಿ: ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ “ಕಪ್ಪತಗುಡ್ಡ”ದ ಸೊಬಗು

0
Spread the love

ಗದಗ: ಔಷಧ ಸಸ್ಯಗಳ ಕಾಶಿ, ಜೀವ ವೈವಿಧ್ಯತೆಯ ತಾಣ, ಅಪಾರ ವನ್ಯ ಜೀವಿಗಳ ಆಶ್ರಯದ ಗೂಡು ಕಪ್ಪತಗುಡ್ಡದ ಸೊಬಗು ಡ್ರೋನ್ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.

Advertisement

ಹೌದು, ಇದು ಗದಗ ಜಿಲ್ಲೆಯ ಕಪ್ಪತಗುಡ್ಡದ ಸೌಂದರ್ಯದ ಸೊಬಗು. ಗದಗ ಜಿಲ್ಲೆಯ ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕುಗಳ ಸುಮಾರು 24,200 ಹೆಕ್ಟರ್ ಪ್ರದೇಶದಲ್ಲಿ ಮೈಚಾಚಿಕೊಂಡಿರುವ ಕಪ್ಪತಗುಡ್ಡದ ಸೌಂದರ್ಯವೀಗ ಆರ್ ಎಫ್ ಒ ಮಂಜುನಾಥ್ ಮೇಗಲಮನಿ ಕ್ಯಾಮರಾ ಕಣ್ಣಲ್ಲಿ ವ್ಯೂವ್ ಆಗಿದೆ.

ಕಪ್ಪತ್ತಗುಡ್ಡದಲ್ಲಿ ಎತ್ತ ನೋಡಿದರೂ, ಬೆಳ್ಳಗಿನ ಮೋಡಗಳು ಗುಡ್ಡವನ್ನು ಆವರಿಸಿಕೊಂಡಿರುವ ರಮಣೀಯ ದೃಶ್ಯಗಳೇ ಕಣ್ಣಿಗೆ ರಾಚುತ್ತವೆ. ಮಳೆಯಿಂದಾಗಿ ಉಂಟಾದ ತಂಪಾದ ವಾತಾವರಣದಲ್ಲಿ ಮೋಡದ ಮರೆಯಲ್ಲಿ ಮಾಯವಾಗಿದ್ದೇವೇನೋ ಎನ್ನುವ ಅನುಭವಾಗುತ್ತದೆ.

ಸುಂದರವಾಗಿ ಮೈತೆಳೆದು ನಿಂತಿರೋ ಕಪ್ಪತಗುಡ್ಡ ತನ್ನೊಡಲಲ್ಲಿ ನೈಸರ್ಗಿಕವಾಗಿಯೇ ಬೆಳೆದಿರೋ ಔಷಧೀಯ ಸಸ್ಯಗಳನ್ನು ಇಟ್ಟುಕೊಂಡಿದೆ. ಇನ್ನೂ ಬೆಳಗಿನ ಸೊಬಗು ಕಣ್ತಂಬಿಕೊಳ್ಳಲು ಸಾಕಷ್ಟು ಪ್ರವಾಸಿಗರು ಆಗಮಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here