ಜಿಎಸ್ಟಿ ಇಳಿಕೆ ಬೆನ್ನಲ್ಲೇ ವಾಹನ ಖರೀದಿ ದಿಢೀರ್ ಹೆಚ್ಚಳ: ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಳ!?

0
Spread the love

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 15ರಂದು ಜಿಎಸ್‌ಟಿ ದರವನ್ನು ಕಡಿಮೆ ಮಾಡುವ ಬಗ್ಗೆ ಘೋಷಿಸಿದ ನಂತರ, ವಾಹನ ಮಾರುಕಟ್ಟೆಯಲ್ಲಿ ಭಾರೀ ಚೈತನ್ಯ ಉಂಟಾಗಿದೆ.

Advertisement

ಸೆಪ್ಟೆಂಬರ್ 22ರಿಂದ ಜಾರಿಗೆ ಬಂದ ಹೊಸ ಜಿಎಸ್‌ಟಿ ದರ ಪ್ರಕಾರ, 350 ಸಿಸಿ ವರೆಗೆ ಇರುವ ದ್ವಿಚಕ್ರ ವಾಹನಗಳ ಮೇಲಿನ ತೆರಿಗೆ ಶೇ.28ರಿಂದ 18ಕ್ಕೆ ಇಳಿಸಲಾಗಿದೆ. ಅದೇ ರೀತಿ, ಪೆಟ್ರೋಲ್‌ ಎಂಜಿನ್ 1,200 ಸಿಸಿ ಹಾಗೂ ಡೀಸೆಲ್‌ ಎಂಜಿನ್ 1,500 ಸಿಸಿ ವರೆಗೆ ಮತ್ತು ಉದ್ದವು 4 ಮೀಟರ್ ಒಳಗಿನ ಕಾರುಗಳ ಮೇಲೂ ತೆರಿಗೆ ಕಡಿತ ಅನ್ವಯವಾಗಿದೆ. ಈ ತೆರಿಗೆ ಇಳಿಕೆಯ ಪರಿಣಾಮವಾಗಿ, ರಾಜ್ಯದಲ್ಲಿ ವಾಹನ ಖರೀದಿಗಳ ಸಂಖ್ಯೆ ಇತಿಹಾಸದಲ್ಲೇ ಹೆಚ್ಚು ಮಟ್ಟಕ್ಕೇರಿದೆ. ಆಗಸ್ಟ್ ತಿಂಗಳಲ್ಲಿ 1,61,214 ಹೊಸ ವಾಹನಗಳು ನೋಂದಣಿ ಆಗಿದ್ದರೆ, ತೆರಿಗೆ ಕಡಿತದ ನಂತರ ಅಕ್ಟೋಬರ್‌ನಲ್ಲಿ 2,52,420 ವಾಹನಗಳು ನೋಂದಣಿ ಆಗಿವೆ. ಅಂದರೆ ಒಟ್ಟು 91,206 ವಾಹನಗಳ ಹೆಚ್ಚಳವಾಗಿದೆ.

ಪ್ರತಿ ದಿನದ ಸರಾಸರಿ ನೋಂದಣಿ ಸಂಖ್ಯೆ ಕೂಡ 6,717 ರಿಂದ 10,517 ಕ್ಕೆ ಏರಿಕೆಯಾಗಿದೆ ಎಂದು ಅಪರ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲೂ ಇದೇ ಬೆಳವಣಿಗೆ ಕಂಡುಬಂದಿದೆ. ಆಗಸ್ಟ್ ತಿಂಗಳಲ್ಲಿ 68,446 ವಾಹನಗಳು ನೋಂದಾಯಿತವಾಗಿದ್ದರೆ, ಅಕ್ಟೋಬರ್‌ನಲ್ಲಿ ಈ ಸಂಖ್ಯೆ 89,014ಕ್ಕೆ ಏರಿಕೆಯಾಗಿದೆ. ದಿನಕ್ಕೆ ಸರಾಸರಿ 3,748 ಹೊಸ ವಾಹನಗಳು ರಸ್ತೆಗಿಳಿಯುತ್ತಿದ್ದು, ಹಿಂದೆಗಿಂತ 1,063 ವಾಹನಗಳಷ್ಟು ಹೆಚ್ಚಾಗಿದೆ. ವಾಹನ ಸವಾರರ ಪ್ರಕಾರ, ತೆರಿಗೆ ಕಡಿತದಿಂದ ಮಧ್ಯಮ ವರ್ಗದ ಜನರು ಹೊಸ ವಾಹನ ಖರೀದಿಗೆ ಮುಕ್ತವಾಗಿ ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ನಗರದಲ್ಲಿ ವಾಹನ ಸಂಚಾರದ ದಟ್ಟಣೆ ಮುಂದಿನ ದಿನಗಳಲ್ಲಿ ಹೆಚ್ಚುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here