ಬೆಂಗಳೂರು:- ನಗರದ ವಾಹನ ಸವಾರರು ನೋಡಲೇಬೇಕಾದ ಸ್ಟೋರಿ. ಇಂದಿನಿಂದ ಎರಡು ದಿನ ನಗರದ ಹಲವೆಡೆ ವಾಹನ ಸಂಚಾರ ಬಂದ್ ಇರಲಿದೆ. ಹೀಗಾಗಿ ವಾಹನ ಸವಾರರು ಸಹಕರಿಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮತ್ತು ನಾಳೆ ದೊಡ್ಡಗುಂಟ ದಸರಾ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಇಂದು ಬೆಳಗ್ಗೆ 9 ಗಂಟೆಯಿಂದ ನಾಳೆ ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.
ವಾಹನ ಸಂಚಾರ ನಿರ್ಬಂಧ:
ಪಾಟರಿ ರಸ್ತೆ – ಎಂ.ಎಂ ರಸ್ತೆ ಜಂಕ್ಷನ್‌ನಿಂದ ಎಂ.ಎಂ ರಸ್ತೆ ಮೂಲಕ ದೊಡ್ಡಗುಂಟಿ ಸರ್ಕಲ್ ಮತ್ತು ಅಸ್ಸೆ ರಸ್ತೆ ಜಂಕ್ಷನ್‌ವರೆಗೆ ಎರಡೂ ಬದಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಅಸ್ಸೆ ರಸ್ತೆ – ಸುಂದರಮೂರ್ತಿ ರಸ್ತೆ ಜಂಕ್ಷನ್‌ನಿಂದ ತಂಬುಚೆಟ್ಟಿ ರಸ್ತೆ ಮೂಲಕ ಎಂ.ಎಂ ರಸ್ತೆ ಪಾಟರಿ ರಸ್ತೆ ಜಂಕ್ಷನ್‌ವರೆಗೆ ಎರಡೂ ಬದಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ರಾಮಕೃಷ್ಣಪ್ಪ ರಸ್ತೆ – ಪಿ.ಎಸ್.ಕೆ ನಾಯ್ಡು ರಸ್ತೆ ಜಂಕ್ಷನ್‌ನಿಂದ ರಾಮಕೃಷ್ಣಪ್ಪ ರಸ್ತೆ ಸುಂದರಮೂರ್ತಿ ರಸ್ತೆ ಮೂಲಕ ಅಸ್ಸೆ ರಸ್ತೆ ಜಂಕ್ಷನ್ಕಡೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ:-
ಪಾಟರಿ ರಸ್ತೆ – ಎಂ.ಎಂ ರಸ್ತೆ ಜಂಕ್ಷನ್‌ನಿಂದ ಎಂ.ಎಂ ರಸ್ತೆ ಮೂಲಕ ದೊಡ್ಡಗುಂಟ ಸರ್ಕಲ್ ಮತ್ತು ಅಸ್ಸೆ ರಸ್ತೆ ಕಡೆಗೆ ಹೋಗುವ ಎಲ್ಲ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಲಾಜರ್ ರಸ್ತೆ ಮುಖಾಂತರ ಬುದ್ಧ ವಿಹಾರ ರಸ್ತೆ ತಲುಪಿ ನಂತರ ಸಿಂಧಿ ಕಾಲೋನಿ ಜಂಕ್ಷನ್ ಮುಖಾಂತರ ಅಸ್ಸಯೇ ರಸ್ತೆ ಕಡೆಗೆ ಸಂಚರಿಸಬಹುದಾಗಿದೆ.
ಅಸ್ಸೆ ರಸ್ತೆ – ಸುಂದರಮೂರ್ತಿ ರಸ್ತೆ ಜಂಕ್ಷನ್‌ನಿಂದ ತಂಬುಚೆಟ್ಟಿ ರಸ್ತೆ – ಎಂ.ಎಂ ರಸ್ತೆ ಕಡೆಗೆ ಹೋಗುವ ಎಲ್ಲ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಲಾಗಿದೆ. ಅಸ್ಸೆ ರಸ್ತೆ ಮೂಲಕ ಸಿಂಧಿ ಕಾಲೋನಿ ಜಂಕ್ಷನ್ ತಲುಪಿ ನಂತರ ಬುದ್ಧವಿಹಾರ ರಸ್ತೆ ಕೆಂಚಪ್ಪ ರಸ್ತೆ ಮೂಲಕ ಎಂ.ಎಂ ರಸ್ತೆ ಕಡೆಗೆ ಹೋಗಬಹುದಾಗಿದೆ.
ರಾಮಕೃಷ್ಣಪ್ಪ ರಸ್ತೆ – ಪಿ.ಎಸ್.ಕೆ ನಾಯ್ಡು ರಸ್ತೆ ಜಂಕ್ಷನ್‌ನಿಂದ ರಾಮಕೃಷ್ಣಪ್ಪ ರಸ್ತೆ – ಸುಂದರಮೂರ್ತಿ ರಸ್ತೆ ಮೂಲಕ ಅಸ್ಸೆ ರಸ್ತೆ ಜಂಕ್ಷನ್ ಕಡೆಗೆ ಹೋಗುವ ಎಲ್ಲ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ವಾಹನ ಸವಾರರು ಪಿ.ಎಸ್.ಕೆ ನಾಯ್ಡು ರಸ್ತೆಯಲ್ಲಿ ನೇರವಾಗಿ ಸಾಗಿ ಅಸ್ಸಯೇ ರಸ್ತೆ ಎಡ ತಿರುವು ಪಡೆದು ನಂತರ ಸದರಿ ರಸ್ತೆಯಲ್ಲಿ ಎಂ.ಇ.ಜಿ ಗೇಟ್ ಬಳಿ ಯೂ ಟರ್ನ್ ಪಡೆದು ಅಸ್ಸಯೇ ರಸ್ತೆ ಜಂಕ್ಷನ್ ಕಡೆಗೆ ಸಂಚರಿಸಬಹುದಾಗಿದೆ.