ಮಂಡ್ಯ: ಟೋಲ್ ಸಿಬ್ಬಂದಿ ಮತ್ತು ವಾಹನ ಸವಾರರ ನಡುವೆ ಮಾತಿನ ಜಟಾಪಟಿ ನಡೆದಿದ್ದು, ವಾಹನ ಸವಾರ ಬ್ಯಾರಿಕೆಟ್ಗಳನ್ನು ಕಾಲಿಂದ ಒದ್ದು ದರ್ಪ ತೋರಿದ ಘಟನೆ ಮಂಡ್ಯದ ತೂಬಿನಕೆರೆ ಬಳಿ ಇರುವ ಬೆ-ಮೈ ರಾಷ್ಟ್ರೀಯ ಹೆದ್ದಾರಿಯ ಬಳಿ ನಡೆದಿದೆ. ಪಾಂಡವಪುರಕ್ಕೆ ತೆರಳಲು ಬೆ-ಮೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಕ್ಸಿಟ್ ಮಾಡಲಾಗಿತ್ತು.
ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಎಕ್ಸಿಟ್‌ನ್ನು ಮುಚ್ಚಿತ್ತು. ಈ ಎಕ್ಸಿಟ್ ಗಣಂಗೂರು ಟೋಲ್ಗೆ ಸಮೀಪವೇ ಇರೋ ಕಾರಣ ಕೆಲ ವಾಹನ ಸವಾರರು ಟೋಲ್ ಕಟ್ಟದೇ ಎಸ್ಕೇಪ್ ಆಗುತ್ತಿದ್ದರು. ಆ ಟೋಲ್ ಮುಗಿದ ಬಳಿಕ ಮತ್ತೆ ಹೆದ್ದಾರಿ ಪ್ರವೇಶ ಮಾಡುತ್ತಿದ್ದರು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಕ್ಸಿಟ್ ಬಂದ್ ಮಾಡುವ ಮೂಲಕ ಟೋಲ್ ಸ್ಕಿಪ್‌ಗೆ ಬ್ರೇಕ್ ಹಾಕಿತ್ತು.
ಇನ್ನು ಎಕ್ಸಿಟ್ ಮುಚ್ಚಿದ್ದ ಬ್ಯಾರಿಕೇಡ್‌ಗಳನ್ನು ವಾಹನ ಸವಾರ ತೆಗೆದಿದ್ದು, ಇದನ್ನು ಪ್ರಶ್ನೆ ಮಾಡಿದ ಟೋಲ್ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಅಲ್ಲದೇ ಬೆಂಗಳೂರು ಮೂಲದ ವಕೀಲ ಪುಟಬೈರೇಗೌಡ ಎಂಬುವರು ಟೋಲ್ ಸಿಬ್ಬಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.