ಬಾಲಿವುಡ್​ ಹಿರಿಯ ನಟ, ನಿರ್ದೇಶಕ ಮನೋಜ್ ಕುಮಾರ್ ನಿಧನ

0
Spread the love

ಬಾಲಿವುಡ್​ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೇಶಕ ಮನೋಜ್‌ ಕುಮಾರ್ ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಹಲವು ತಿಂಗಳಿನಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಾ ಮನೋಜ್‌ ಕುಮಾರ್‌ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

Advertisement

ರಾಷ್ಟ್ರ ಪ್ರೇಮದ ಸಿನಿಮಾಗಳನ್ನು ಮಾಡಿ ಹೆಸರು ಮಾಡಿದ್ದ ಕಾರಣಕ್ಕೆ ಮನೋಜ್‌ ಕುಮಾರ್‌ ಅವರಿಗೆ ‘ಭಾರತ್ ಕುಮಾರ್’ ಎಂಬ ಹೆಸರನ್ನೂ ಇಡಲಾಗಿತ್ತು. ಇದೀಗ ಅವರ ಸಾವಿಗೆ ಬಾಲಿವುಡ್‌ ಮಂದಿ ಕಂಬನಿ ಮಿಡಿದಿದ್ದಾರೆ.

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮನೋಜ್‌ ಕುಮಾರ್‌ ಅವರನ್ನು ಕೆಲ ವಾರಗಳ ಹಿಂದೆ ಮುಂಬೈನ ಕೊಕಿಲಾಬೇನ್ ಧೀರುಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು (ಏಪ್ರಿಲ್ 4) ಮುಂಜಾನೆ 3.30ರ ಸುಮಾರಿಗೆ ಅವರು ನಿಧನ ಹೊಂದಿದ್ದಾರೆ.

ಮನೋಜ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ಉಪ್ಕಾರ್’ (1967) ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಸರ್ಕಾರದ ಕಡೆಯಿಂದ ಅವರಿಗೆ ಪದ್ಮಶ್ರೀ (1992) ಹಾಗೂ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್​ (2015) ನೀಡಿ ಗೌರವಿಸಲಾಗಿದೆ.

ಮನೋಜ್ ಕುಮಾರ್ ಅವರು ಪಂಜಾಬಿ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. 1937ರಲ್ಲಿ ಇವರ ಜನನ ಆಯಿತು. ಅವರ ಮೂಲ ಹೆಸರು ಹರಿಕೃಷ್ಣ ಗಿರಿ ಗೋಸ್ವಾಮಿ ಎಂದು. ಅವರು 10ನೇ ವಯಸ್ಸಿಗೆ ಬಂದಾಗ ಇಡೀ ಕುಟುಂಬ ದೆಹಲಿಗೆ ಸ್ಥಳಾಂತರ ಆಯಿತು. 1957ರ ಸಮಯದಲ್ಲಿ ನಟನಾಗಿ ಮನೋಜ್ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರು.


Spread the love

LEAVE A REPLY

Please enter your comment!
Please enter your name here