ವಿಜಯಸಾಕ್ಷಿ ಸುದ್ದಿ, ಗದಗ : ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹಾಗೂ ಬಾಗಲಕೋಟಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಅವರು ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ರಸ್ತೆಯಲ್ಲಿರುವ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಸಿಹಿ ಹಂಚಿ ಪಠಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಕ್ಕಿರೇಶ ರಟ್ಟಿಹಳ್ಳಿ, ಲಿಂಗರಾಜ ಪಾಟೀಲ, ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ, ಕೆ.ಕೆ. ಮಳಗೌಡ್ರ, ಜಗನ್ನಾಥಸಾ ಭಾಂಡಗೆ, ಬಿ.ಎಚ್. ಲದ್ವಾ, ತೊಟೊಸಾ ಭಾಂಡಗೆ, ಪ್ರಕಾಶ ಬಾಕಳೆ, ಶಶಿಧರ ದಿಂಡೂರ, ಡಿ.ಬಿ. ಕರಿಗೌಡ್ರ, ನಿರ್ಮಲಾ ಕೊಳ್ಳಿ, ಸ್ವಾತಿ ಅಕ್ಕಿ, ಕವಿತಾ ಬಂಗಾರಿ, ಜಯಶ್ರೀ ಉಗಲಾಟದ, ರೇಖಾ ಬಂಗಾರಶೆಟ್ಟರ, ಚನ್ನಮ್ಮ ಹುಳಕಣ್ಣವರ, ಕಸ್ತೂರಿ ಕಮ್ಮಾರ, ಕಮಲಾಕ್ಷೀ ಗೊಂದಿ, ರೇಖಾ ಬೆಟಗೇರಿ, ರತ್ನಾ ಕುರಗೋಡ, ಉಮೇಶ ಹಡಪದ, ಮಂಜುನಾಥ ಶಾಂತಗೇರಿ, ಮಾಂತಾಶ ಬಾತಾಖಾನಿ, ಗೋರಪ್ಪಜ್ಜ, ಹನಮಂತ ದಿಂಡೆಣ್ಣವರ, ಕುಮಾರ ಮಾರನಬಸರಿ, ಸಿರಾಜ ಲಕ್ಕುಂಡಿ, ನಿಸಾರ ನಮಾಜಿ, ವಿನೋದ ಹಂಸನೂರ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.