ಚನ್ನಮ್ಮ ಈ ನಾಡಿನ ಹೆಮ್ಮೆ : ಮಂಜುನಾಥ ಮಾಗಡಿ

0
Victory of Veerarani Kittoor Channamma
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸ್ವತಂತ್ರ ಭಾರತದ ಬೆಳ್ಳಿಚುಕ್ಕಿ ಕಿತ್ತೂರ ಚನ್ನಮ್ಮ ಕನ್ನಡ ನಾಡಿನ ಸ್ವಾತಂತ್ರ್ಯ, ಇಲ್ಲಿನ ಜನ, ಜಲ, ಮತ್ತು ಸಂಪತ್ತಿನ ಸಂರಕ್ಷಣೆ ಹಾಗೂ ಸ್ವಾಭಿಮಾನಕ್ಕಾಗಿ ಜೀವನವನ್ನೇ ಸಮರ್ಪಿಸಿಕೊಂಡ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದಾಳೆ ಎಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ ಹೇಳಿದರು.

Advertisement

ಅವರು ಬುಧವಾರ ವೀರರಾಣಿ ಕಿತ್ತೂರ ಚನ್ನಮ್ಮನ ವಿಜಯೋತ್ಸವದ ಅಂಗವಾಗಿ ಪಟ್ಟಣದಲ್ಲಿನ ಕಿತ್ತೂರ ಚನ್ನಮ್ಮನ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕ್ರಾಂತಿ ಕಹಳೆ ಮೊಳಗಿಸಿದ ವೀರರಾಣಿ ಕಿತ್ತೂರು ಚನ್ನಮ್ಮ ಕನ್ನಡ ನಾಡಿನ ಹೆಮ್ಮೆ. ಚನ್ನಮ್ಮಳ ದೇಶಪ್ರೇಮ, ಶೌರ್ಯ, ಸಾಹಸ ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು ಎಂದರು.

ಹಿರಿಯ ಮುಖಂಡರಾದ ಡಿ.ಬಿ. ಬಳಿಗಾರ, ಚನ್ನಪ್ಪ ಜಗಲಿ ಮಾತನಾಡಿ, ಚನ್ನಮ್ಮಳನ್ನು ಕೇವಲ ಒಂದು ಜಾತಿ, ಜನಾಂಗಕ್ಕೆ ಸೀಮಿತಗೊಳಿಸದೇ ಎಲ್ಲರೂ ಗೌರವಿಸಬೇಕು. ಅ.23ರಂದು ಚನ್ನಮ್ಮನ ವಿಜಯೋತ್ಸವವನ್ನು ರಾಜ್ಯ ಸರಕಾರ ಸಾರ್ವತ್ರೀಕರಣಗೊಳಿಸಿರುವುದು ಸ್ವಾಗತಾರ್ಹವಾಗಿದ್ದು, ಆಚರಣೆ ಅರ್ಥಪೂರ್ಣವಾಗಬೇಕು.

ಸ್ವಾತಂತ್ರ್ಯ ಹೋರಾಟಗಾರರ, ಮಹಾತ್ಮರ ಜಯಂತ್ಯುತ್ಸವವನ್ನು ರಜಾರಹಿತವಾಗಿ ಆಚರಣೆ ಮಾಡುವುದು ಅತ್ಯಂತ ಉಪಯುಕ್ತ ಕಾರ್ಯವಾಗಿದೆ. ಚನ್ನಮ್ಮ ಈ ನಾಡಿನ ಹೆಮ್ಮೆಯ ಮಹಿಳೆಯಾಗಿದ್ದು ಅವರನ್ನು ಸ್ಮರಿಸುವ ಕಾರ್ಯವಾಗಬೇಕು ಎಂದರು.

ಈ ವೇಳೆ ಪಂಚಮಸಾಲಿ ಸಮಾಜದ ಮುಖಂಡರಾದ ಚಂಬಣ್ಣ ಬಾಳಿಕಾಯಿ, ಪ್ರವೀಣ ಬಾಳಿಕಾಯಿ, ಮಹಾದೇವಪ್ಪ ಅಣ್ಣಿಗೇರಿ, ಈರಣ್ಣ ಕಟಗಿ, ಚಂದ್ರು ಮಾಗಡಿ, ಅಪ್ಪಣ್ಣ ಉಮಚಗಿ, ನೀಲಪ್ಪ ಶರಸೂರಿ, ಅಭಯ ಜೈನ್, ವೀರಣ್ಣ ಅಕ್ಕೂರ, ಬಸವರಾಜ ಜಾಲಗಾರ, ಬಸವರಾಜ ಗೋಡಿ, ಗಂಗಾಧರ ಗೋಡಿ, ಶಿವನಗೌಡ್ರ ಅಡರಕಟ್ಟಿ, ಶಂಕರ ಬ್ಯಾಡಗಿ, ಶಿವಜೋಗೆಪ್ಪ ಚಂದರಗಿ, ರಾಜು ಪಾಟೀಲ, ಪವನ ಬಂಕಾಪೂರ, ಪಕ್ಕೀರೇಶ ಅಣ್ಣಿಗೇರಿ, ಶಿವಾನಂದ ಬನ್ನಿಮಟ್ಟಿ, ಮಹಾಂತೇಶ ಉಮಚಗಿ, ಮಲ್ಲಿಕಾರ್ಜುನ ನೀರಾಲೋಟಿ, ಮಂಜುನಾಥ ಮುಳಗುಂದ, ಮಲ್ಲೇಶಪ್ಪ ಒಡ್ಡರ ಹಲವರಿದ್ದರು.


Spread the love

LEAVE A REPLY

Please enter your comment!
Please enter your name here