ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ರಾಜ್ಯದಲ್ಲಿ ಹೆಚ್ಚುತ್ತಿರುವ ದೇಶ ವಿರೋಧಿ ಕೃತ್ಯಗಳು, ದೇಶ ವಿಭಜನೆಯ ಹೇಳಿಕೆಗಳನ್ನು ಖಂಡಿಸಿ ಜಾಗ್ರತಾ ಪಾದಯಾತ್ರೆಯನ್ನು ನಗರದ ಭೂಮರೆಡ್ಡಿ ಸರ್ಕಲ್‌ನಿಂದ ಟಾಂಗಾಕೂಟವರೆಗೆ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಕ್ಕಿರೇಶ್ ರಟ್ಟಿಹಳ್ಳಿ, ಲಿಂಗರಾಜ್ ಪಾಟೀಲ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಭಾರತಿ ಅಳವಂಡಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ, ಪಕ್ಷದ ಹಿರಿಯರಾದ ಕಾಂತೀಲಾಲ ಬನ್ಸಾಲಿ, ಸಿದ್ದು ಪಲ್ಲೇದ, ನಗರಸಭಾ ಅಧ್ಯಕ್ಷೆ ಉಷಾ ದಾಸರ, ಇರ್ಷಾದ ಮಾನ್ವಿ, ಅನಿಲ ಅಬ್ಬಿಗೇರಿ, ದೇವಪ್ಪ ಗೊಟೂರ, ಅಶೋಕ ಸಂಕಣ್ಣವರ, ವಿನಾಯಕ ಮಾನ್ವಿ, ನಾಗರಾಜ ತಳವಾರ, ಗಂಗಾಧರ ಹಬೀಬ, ಅಶೋಕ ಕರೂರ, ಅಪ್ಪಣ್ಣ ಟೆಂಗಿನಕಾಯಿ, ಅಶೋಕ ಕರೂರ, ಅಮರನಾಥ ಬೆಟಗೇರಿ, ಶಿವು ಹಿರೇಮನಿಪಾಟಿಲ, ಸುಧೀರ ಕಾಟಿಗರ, ವಿಜಯಲಕ್ಷ್ಮಿ ಶಶಿಧರ ದಿಂಡೂರ, ವಿಜಯಲಕ್ಷ್ಮಿ ಮಾನ್ವಿ, ಸ್ವಾತಿ ಅಕ್ಕಿ, ವಿದ್ಯಾವತಿ ಗಡಗಿ, ಸಿದ್ರಾಮೇಶ ಹಿರೇಮಠ, ಲಕ್ಷ್ಮಿ ಶಂಕರ ಕಾಕಿ, ಬೂದಪ್ಪ ಹಳ್ಳಿ, ರಮೇಶ ಸಜ್ಜಗಾರ, ರೇಖಾ ಬಂಗಾರಶೆಟ್ಟರ, ಪದ್ಮಿನಿ ಮುತ್ತಲದಿನ್ನಿ, ಶೇಖವ್ವ ಮಾಸರೆಡ್ಡಿ, ಮಾಂತೇಶ ಬಾತಾಖಾನಿ, ವೆಂಕಟೇಶ ಹಬೀಬ, ನವೀನ ಕೊಟೆಕಲ್, ಸುರೇಶ ಮರಳಪ್ಪನವರು, ಸುರೇಶ ಚಿತ್ತರಗಿ, ಶಿವು ಗೊಟೂರ, ಹಾಗೂ ಚುನಾಯಿತ ಪ್ರತಿನಿಧಿಗಳು, ಪ್ರಮುಖರು, ಕಾರ್ಯಕರ್ತರು, ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಮಂತ್ರಿಗಳಾಗಲಿ ಎಂದು ತಮಿಳುನಾಡಿನಿಂದ ದಿಲ್ಲಿಯವರೆಗೆ ಬೈಕ್ ಸವಾರಿ ಕೈಗೊಂಡ ವೀರ ಮಹಿಳೆ ಮಾತಾ ರಾಜಲಕ್ಷ್ಮಿ ಮಂದಾ ಅವರನ್ನು ಸನ್ಮಾನಿಸಲಾಯಿತು.