ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೆ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಹಲವು ಭಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ವಿದೇಶದಲ್ಲಿ ಹಾಲಿಡೇ ಎಂಜಾಯ್ ಮಾಡಿದ್ದರು. ಆದರೆ ಇದುವರೆಗೂ ರಶ್ಮಿಕಾ ಹಾಗೂ ವಿಜಯ್ ತಮ್ಮ ಪ್ರೀತಿಯನ್ನು ಪಬ್ಲಿಕ್ ನಲ್ಲಿ ಒಪ್ಪಿಕೊಂಡಿಲ್ಲ. ಇದೀಗ ವಿಜಯ್ ದೇವರಕೊಂಡ ಗರ್ಲ್ ಪ್ರೆಂಡ್ ನ ಹೆಮ್ಮೆಯಿಂದ ಪರಿಚಯ ಮಾಡಿದ್ದಾರೆ.
ಅಂದ ಹಾಗೆ ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್ ಫ್ರೆಂಡ್ ಟೀಸರ್ ನ ವಿಜಯ್ ದೇವರಕೊಂಡ ರಿಲೀಸ್ ಮಾಡಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣಾಗೆ ಜೋಡಿಯಾಗಿ ಕನ್ನಡದ ನಟ ದೀಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇವರ ಈ ಒಂದು ಸಿನಿಮಾದ ಫಸ್ಟ್ ಟೀಸರ್ ಇದೀಗ ಹೊರ ಬಂದಿದೆ.
ಚಿತ್ರದ ಟೀಸರ್ ನೋಡಿದಾಗ ಇದು ಕನ್ನಡದ ದಿಯಾ ಚಿತ್ರದ ರೀತಿನೇ ಕಾಣಿಸುತ್ತದೆ. ಖುಷಿ ರವಿ ಮಾಡಿರೋ ದಿಯಾ ಪಾತ್ರದ ರೀತಿನೇ ರಶ್ಮಿಕಾ ಪಾತ್ರವೂ ಇಲ್ಲಿ ಕಾಣಿಸುತ್ತದೆ. ದಿಯಾ ಸಿನಿಮಾದ ನಾಯಕ ದೀಕ್ಷಿತ್ ಶೆಟ್ಟಿ ಇಲ್ಲಿ ಇರೋದ್ರಿಂದಲೇ ದಿ ಗರ್ಲ್‌ಫ್ರೆಂಡ್ ಚಿತ್ರದ ದಿಯಾ ಚಿತ್ರದ ರೀಮೇಕ್ ಅನಿಸುತ್ತಿದೆ.
ಆದರೆ, ಈ ಬಗ್ಗೆ ಅಧಿಕೃತ ಘೋಷಣೆ ಎಲ್ಲೂ ಇಲ್ಲ ಬಿಡಿ. ಯಾರೂ ಇಲ್ಲಿವರೆಗೂ ಹೇಳಿಕೊಂಡಂತೆ ಕಾಣೋದಿಲ್ಲ. ಇನ್ನುಳಿದಂತೆ ದಿ ಗರ್ಲ್ ಫ್ರೆಂಡ್ ಟೀಸರ್ ಬಹು ಭಾಷೆಯಲ್ಲೂ ರಿಲೀಸ್ ಆಗುತ್ತಿದೆ.
‘ಜಗತ್ತಿಗೆ ದಿ ಗರ್ಲ್‌ಫ್ರೆಂಡ್ ಪರಿಚಯಿಸುತ್ತಿದ್ದೇನೆ. ಈ ಟೀಸರ್ನ ಪ್ರತಿ ದೃಶ್ಯವೂ ನನಗೆ ಇಷ್ಟ ಆಯಿತು. ಈ ಕಥೆ ತೆರೆದುಕೊಳ್ಳುವುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ. ನಮ್ಮಂಥ ಹಲವು ನಟರಿಗೆ ರಶ್ಮಿಕಾ ಅವರು ಅದೃಷ್ಟದ ನಟಿ. ದೊಡ್ಡ ದೊಡ್ಡ ಯಶಸ್ಸಿನ ಭಾಗವಾಗಿದ್ದಾರೆ. ಅವರು ದೊಡ್ಡ ಸ್ಟಾರ್ ನಟಿಯಾಗಿ ಬೆಳೆದಿದ್ದರೂ ಕೂಡ ನಾನು 8 ವರ್ಷಗಳ ಹಿಂದೆ ಭೇಟಿಯಾದ ಹುಡುಗಿಯ ರೀತಿಯೇ ಇದ್ದಾರೆ. ಅವರಿಗೆ ಇನ್ನಷ್ಟು ಯಶಸ್ಸು ಸಿಗಲೆಂದು ಹಾರೈಸುತ್ತೇನೆ’ ಎಂದು ವಿಜಯ್ ದೇವರಕೊಂಡ ಅವರು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ದಿ ಗರ್ಲ್‌ಫ್ರೆಂಡ್ ಚಿತ್ರದ ತೆಲುಗು ಚಿತ್ರದ ಟೀಸರ್ ಈಗ ರಿಲೀಸ್ ಆಗಿದೆ. ತಮಿಳು ಭಾಷೆಯ ಟೀಸರ್ ಮಧ್ಯಾಹ್ನ 1.8 ಕ್ಕೆ ರಿಲೀಸ್ ಆಗಿದೆ. ಕನ್ನಡ ಮತ್ತು ಮಲೆಯಾಳಂ ಭಾಷೆಯ ಟೀಸರ್ ಮಧ್ಯಾಹ್ನ 3.6 ಕ್ಕೆ ಬಿಡುಗಡೆ ಆಗುತ್ತಿದೆ. ಸಂಜೆ 5.49ಕ್ಕೆ ಹಿಂದಿ ಭಾಷೆಯ ಟೀಸರ್ ರಿಲೀಸ್ ಆಗುತ್ತಿದೆ. ಇನ್ನುಳಿದಂತೆ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಬೇಕಿದೆ.