ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಿಜಯ ಕರಡಿ ಆಯ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 19ನೇ ವಾರ್ಡ್ನ ಸದಸ್ಯ ವಿಜಯ ಕರಡಿ ಅವಿರೋಧ ಆಯ್ಕೆಯಾಗಿದ್ದಾರೆ.

Advertisement

ಮಾ.28ರ ವಿಶೇಷ ಸಾಮಾನ್ಯ ಸಭೆಯಲ್ಲಿ 11 ಜನ ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ಶನಿವಾರ ಸ್ಥಾಯಿ ಸಮಿತಿ ಸದಸ್ಯರ ಸಭೆಯಲ್ಲಿ ಹಾಜರಿದ್ದ 8 ಸದಸ್ಯರ ಸಮ್ಮುಖದಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿಜಯ ಕರಡಿ ಅವರ ಹೆಸರನ್ನು ಹಿರಿಯ ಸದಸ್ಯ ರಾಜಣ್ಣ ಕುಂಬಿ ಸೂಚಿಸಿದರು. ಉಳಿದ ಸದಸ್ಯರು ಕೈ ಎತ್ತುವ ಮೂಲಕ ಈ ಆಯ್ಕೆಯನ್ನು ಅನುಮೋದಿಸಿದರು. 3 ಸದಸ್ಯರು ಗೈರಾಗಿದ್ದರು. ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರು ಆಯ್ಕೆಯನ್ನು ಘೋಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯ ಕರಡಿ, ಪುರಸಭೆ ಸರ್ವಸದಸ್ಯರು, ಊರಿನ ಹಿರಿಯರು, ಮುಖಂಡರು ಸೇರಿ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ನನಗೆ ಅವಕಾಶ ನೀಡಿದ್ದಾರೆ. ಪಟ್ಟಣದ ಅಭಿವೃದ್ಧಿ ಕಾರ್ಯದಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದರು.

ಉಪಾಧ್ಯಕ್ಷ ಫಿರ್ದೋಶ್ ಆಡೂರ, ಸದಸ್ಯರಾದ ರಾಜೀವ ಕುಂಬಿ, ಜಯಕ್ಕ ಕಳ್ಳಿ, ಬಸವರಾಜ ಓದುನವರ, ಪ್ರವೀಣ ಬಾಳಿಕಾಯಿ, ರಾಮಪ್ಪ ಗಡದವರ, ಸಿಕಂದರ ಕಣಕೆ, ಮಂಜವ್ವ ದುರಗಣ್ಣವರ ಮುಖ್ಯಾಧಿಕಾರಿ ಮಹೇಶ ಹಡಪದ, ಸಿಬ್ಬಂದಿಗಳಿದ್ದರು.


Spread the love

LEAVE A REPLY

Please enter your comment!
Please enter your name here