ಬಳ್ಳಾರಿ: ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಅವರು 6ನೇ ಬಾರಿ ಜೈಲಿಗೆ ಆಗಮಿಸಿದ್ದಾರೆ. ದರ್ಶನ್ ನೋಡಲು ಜೈಲಿಗೆ ಭೇಟಿ ಕೊಟ್ಟಿರುವ ವಿಜಯಲಕ್ಷ್ಮಿ ಜೊತೆ ದಿನಕರ್ ತೂಗುದೀಪ, ನಟ ಧನ್ವೀರ್ ಗೌಡ, ವಿಜಯಲಕ್ಷ್ಮಿ ಅವರ ತಂಗಿಯ ಗಂಡ ಸುಶಾಂತ್ ನಾಯ್ಡು ಆಗಮಿಸಿದ್ದಾರೆ. ಈ ವೇಳೆ, ಎರಡು ಬ್ಯಾಗ್‌ಗಳಲ್ಲಿ ಬಟ್ಟೆ ಮತ್ತು ಬೇಕರಿ ತಿನಿಸುಗಳನ್ನು ತರಲಾಗಿದೆ.
Advertisement
ವಿಜಯಲಕ್ಷ್ಮಿ ದರ್ಶನ್ ಭೇಟಿಗೆ ಆಗಮಿಸುತ್ತಿರುವ ಸುದ್ದಿ ತಿಳಿದು ಬಳ್ಳಾರಿ ಸೆಂಟ್ರಲ್ ಜೈಲಿನ ಮುಂದೆ ನೂರಾರು ಅಭಿಮಾನಿಗಳು ಸೇರಿದ್ದರು. ದರ್ಶನ್ ಅವರಿಗೆ ಬೇಲ್ ಸಿಗ್ತಿಲ್ಲ ಎನ್ನುವ ಬೇಸರ ವಿಜಯಲಕ್ಷ್ಮಿ ಅವರ ಮುಖದಲ್ಲಿತ್ತು. ಪ್ರತಿ ವಾರ ಕೂಡ ದರ್ಶನ್ ನೋಡಲು ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಬರುತ್ತಿದ್ದಾರೆ. ದರ್ಶನ್ ಪರ ಕಾನೂನು ಹೋರಾಟ ಮಾಡ್ತಿರುವ ವಿಜಯಲಕ್ಷ್ಮಿ ಹಲವು ದೇವಾಲಯಗಳಿಗೂ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ರು.