ಬೆಂಗಳೂರು: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ತಮ್ಮ ಟೆಂಪಲ್ ರನ್ ಮುಂದುವರೆಸಿದ್ದಾರೆ. ಇದೀಗ ಬೆಂಗಳೂರು ನಗರದ ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿರುವ ವಿಜಯಲಕ್ಷ್ಮಿ, ನಟ ದರ್ಶನ್ ಹಾಗೂ ಕುಟುಂಬದ ಹೆಸರಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ.
Advertisement
ಹೌದು ದರ್ಶನ್ ಜೈಲಿನಲ್ಲಿದ್ದಾಗ ವಿಜಯಲಕ್ಷ್ಮಿ ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಇದೀಗ ಅಣ್ಣಮ್ಮ ದೇವಿಗೆ ದರ್ಶನ್ ಪತ್ನಿ ಹರಕೆ ಸಲ್ಲಿಸಿದ್ದಾರೆ. ಅಣ್ಣಮ್ಮ ದೇವಿಗೆ ಸೀರೆ ಜೊತೆ ಮಡಿಲಕ್ಕಿ ತುಂಬಿ ಹರಕೆ ತೀರಿಸಿದ್ದಾರೆ.
ರೇಣುಕಾಸ್ವಾಮಿ ಕೇಸ್‌ನಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಅವರು ಡೆವಿಲ್ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ವಿವಿಧ ಜಾಗಗಳಲ್ಲಿ ಡೆವಿಲ್ ಸಿನಿಮಾ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ.