ವಿಜಯಸಾಕ್ಷಿ ಸುದ್ದಿ, ಗದಗ: ನವಭಾರತ ಉದಯ ಪ್ರತಿಷ್ಠಾನ ಬೆಂಗಳೂರು ವತಿಯಿಂದ ಗದುಗಿನ ಎಂ.ಜಿ. ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಮಕ್ತುಮಸಾಬ ನಾಯಕ ಅವರಿಗೆ ಬೆಂಗಳೂರಿನ ವಿಜಯನಗರದ ಶಾಸಕರಾದ ಎಮ್. ಕೃಷ್ಣಪ್ಪ `ಕನ್ನಡ ಕಣ್ಮಣಿ’ ಪ್ರಶಸ್ತಿ ಪ್ರದಾನ ಮಾಡಿದರು.
Advertisement
ಸುಮಾರು ಮೂರು ವರ್ಷಗಳ ಅವಧಿಯಲ್ಲಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುಮಾರು 28 ಲಕ್ಷ ವಿದ್ಯಾರ್ಥಿವೇತನ, ಸಾಕಷ್ಟು ಶಾಲೆಗಳಿಗೆ ಲೇಖನ ಸಾಮಗ್ರಿಗಳ, ಬ್ಯಾಗ್‌ಗಳ ವಿತರಣೆ, ಕೋವಿಡ್-19 ಸಂದರ್ಭದಲ್ಲಿ 33 ದಿನಗಳ ಅನ್ನದಾಸೋಹ ಕಾರ್ಯಕ್ರಮ ನೆರವೇರಿಸಿದ ಇವರ ಸಮಾಜ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಸಂದಿದೆ.